ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ.

ಪೆರ್ಡೂರು: ಪೆರ್ಡೂರು ಬಂಟರ ಸೌಹಾರ್ದ ಸಹಕಾರಿಯ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಶ್ರೀಮತಿ ಸರ್ವಾಣಿ ಪಲ್ಲಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಪೆರ್ಡೂರಿನಲ್ಲಿ ನಡೆಸಲಾಯಿತು.

ಮುಂದಿನ ಸಾಲಿನ ಮಹಾಸಭೆಯಲ್ಲಿ ಮೊದಲು ಸಹಕಾರಿಯ ಶಾಖೆಗಳನ್ನು ವಿಸ್ತರಿಸಲಾಗುವುದೆಂದು ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಶಾಂತರಾಮ ಸೂಡ ಅವರು ಹೇಳಿದರು.

ಈ ಸಂದರ್ಭದಲ್ಲಿ ಶೇ.10 ಡಿವಿಡೆಂಟ್ ಘೋಷಿಸಿದರು. ರೂ.6 ಲಕ್ಷದಷ್ಟು ವಿದ್ಯಾರ್ಥಿ ವೇತನ, ವಸತಿ, ಆರೋಗ್ಯ ವಿಚಾರದಲ್ಲಿ ಘೋಷಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ, ಸಾಯಿಶಾ ನಿರ್ದೇಶಕರಾದ ಶಿವರಾಮ ಶೆಟ್ಟಿ, ಮಹೇಶ್ ಕುಮಾರ್ ಶೆಟ್ಟಿ, ಪ್ರಮೋದ್ ರೈ, ರಾಜಕುಮಾರ್ ಶೆಟ್ಟಿ, ಭಾರತಿ.ಎಸ್ ಶೆಟ್ಟಿ, ಸರಳಾ ಎಸ್ ಹೆಗ್ಡೆ, ದಿನೇಶ್ ಚಂದ್ರ ಶೆಟ್ಟಿ, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಶೆಟ್ಟಿ ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ರಾಜ್ ಕುಮಾರ್ ಶೆಟ್ಟಿ ಸ್ವಾಗತಿಸಿ ಶ್ರೀಧರ.ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.