ಪೆರ್ಡೂರು: ಪಾಡಿಗಾರ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಪೆರ್ಡೂರು: ಅನಾರೋಗ್ಯದ ನಡುವೆ ತೀರಾ ಬಡತನದಲ್ಲಿ ಜೀವನ ಸಾಗಿಸಿದ್ದ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಟ್ಟ ಪೆರ್ಡೂರು ಗೆಳೆಯರ ಬಳಗದ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ 14 ವರ್ಷಗಳಿಂದ ಪೆರ್ಡೂರು ಸುತ್ತಮುತ್ತ ಪ್ರದೇಶಗಳಲ್ಲಿ ಸಮಾಜಮುಖಿ ಚಟುವಟಿಕೆ ಜೊತೆ ಅಸಕ್ತರಿಗೆ ಸಹಾಯಧನ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಹಾಯ, ರಕ್ತದಾನ ಆರೋಗ್ಯ ತಪಾಸಣಾ ಶಿಬಿರಗಳು, ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಸೇರಿದಂತೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಮಿಕ್ಕಿ ಸಹಾಯಸ್ತ ಚಾಚುತ್ತ ಬಂದಿರುವ ಗೆಳೆಯರ ಬಳಗ ಪೆರ್ಡೂರು ಸಂಘಟನೆ ಇದೀಗ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಮುಂದಾಗಿದೆ.

ಮಾ. 2ರಂದು ಮನೆ ಹಸ್ತಾಂತರ:
ಪಾಡಿಗಾರ ಐದು ಸೆಂಟ್ಸ್ ನಿವಾಸಿ ಉದಯ್ ಪೂಜಾರಿ ಅವರು ತನ್ನ ಸ್ವಂತ ಸೂರನ್ನು ಕಟ್ಟಬೇಕು ಎಂದು ಮುಂದಾದರು. ಆದರೆ
ಒಂದೆಡೆ ಬಡತನ ಇನ್ನೊಂದೆಡೆ ಅನಾರೋಗ್ಯದ ನಡುವೆ ಮನೆ ಕಟ್ಟಲಾಗದೆ ಕಂಗಾಲಾಗಿದ್ದರು. ಇದನ್ನು ಗಮನಿಸಿದ ಗೆಳೆಯರ ಬಳಗ ಪೆರ್ಡೂರು ತಂಡ ಸದಸ್ಯರೇ ಒಟ್ಟುಗೂಡಿಸಿದ ಹಣದಿಂದ ಸುಮಾರು 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿದ್ದು ಫೆ.2ರಂದು ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.