ಉಡುಪಿ: ಸೊಸೈಟಿಯ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 1ರಂದು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಸ್ಥೆಯ ಉಪಾಧ್ಯಕ್ಷರಾದ ಪಾಂಡುರಂಗ ಕಾಮತ್ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ವಾರ್ಷಿಕ ವರದಿ ,ಲೆಕ್ಕಪತ್ರ, ಮುಂದಿನ ಸಾಲಿನ ಆಯವ್ಯಯ ಮಂಡಿಸಿದರು.
ಸಂಘದ ಪಾಲುಬಂಡವಾಳ ರೂ.1.80 ಕೋಟಿ, ಠೇವಣಿ ರೂ.116.86 ಕೋಟಿ, ಸ್ವಂತ ನಿಧಿ ರೂ.11.68 ಕೋಟಿ , ಹೊರಬಾಕಿ ಸಾಲಗಳು ರೂ.82.45 ಕೋಟಿ ಹೊಂದಿ ರೂ.2.59 ಕೋಟಿ ನಿವ್ವಳ ಲಾಭ ಗಳಿಸಿ ಶೇ.15 % ಪಾಲು ಮುನಾಫೆ ಘೋಷಿಸಿತು. 2024 ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಶೇ 80% ಯಾ ಅಧಿಕ ಅಂಕ ಗಳಿಸಿದ “ಅ”ವರ್ಗದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ದೀಕ್ಷಿತ್ ನಾಯಕ್ ಕಬ್ಯಾಡಿ ಹಾಗೂ ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು, ಅಂತರಾಷ್ಟೀಯ ಮಟ್ಟದಲ್ಲಿ ಆಯ್ಕೆ ಆಗಿರುವ ಸುಷ್ಮಾ ತೆಂಡುಲ್ಕರ್ ಬೈಲೂರು ಇವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷರು ಸಂಘದ ಸ್ವಂತ ಕಟ್ಟಡ ನಿರ್ಮಾಣದ ಪ್ರಗತಿ ಮುಂದಿನ ವರ್ಷದಲ್ಲಿ ಉದ್ಘಾಟನೆಯ ಹೊಸ್ತಿಲಿನಲ್ಲಿರುವ ಮಾಹಿತಿ ನೀಡಿದರು. ಹೊಸ ಹೊಸ ಸೇವೆಗಳೊಂದಿಗೆ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿರುವ ಸೊಸೈಟಿಯ ಪ್ರಯೋಜನ ಎಲ್ಲರೂ ಪಡೆಯಿರಿ ಎಂದು ಕೋರಿದರು. ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ ಬಿ.ರಾಮಕೃಷ್ಣ ನಾಯಕ್ ಪರ್ಕಳ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಆತ್ರಾಡಿ, ರವೀಂದ್ರ ಪಾಟ್ಕರ್ ಬಂಟಕಲ್ಲು, ವಿಜೇತ ಕುಮಾರ್ ಬೆಳ್ಳರ್ಪಾಡಿ, ಕೆ ಗಣಪತಿ ನಾಯಕ್ ದೇವಿನಗರ, ಗಣಪತಿ ಪ್ರಭು ಕುಕ್ಕೆಹಳ್ಳಿ, ಶ್ರೀಮತಿ ಜಯಂತಿ ನಾಯಕ್ ಪರ್ಕಳ, ಶ್ರೀಮತಿ ರೂಪಾ ನಾಯಕ್ 80 ಬಡಗಬೆಟ್ಟು ವೇದಿಕೆ ಮೇಲೆ ಉಪಸ್ಥಿತರಿದ್ದು, ವಾಸುದೇವ್ ಪ್ರಭು ಅಲೆವೂರು ಕಾರ್ಯಕ್ರಮ ನಿರೂಪಿಸಿ ನಿರ್ದೇಶಕ ರವೀಂದ್ರ ಪಾಟ್ಕರ್ ವಂದಿಸಿದರು.