ಪರ್ಕಳ: ರಾಷ್ಟ್ರೀಯ ಹೆದ್ದಾರಿ ಏರು ರಸ್ತೆ ಹತ್ತಲಾಗದೆ ಹಿಮ್ಮುಖ ಚಲಿಸಿ ಗ್ಯಾರೇಜ್ ಗೆ ನುಗ್ಗಿದ ಲಾರಿ; ಹಲವು ವಾಹನ ಜಖಂ

ಉಡುಪಿ: ಮಣಿಪಾಲ ಸಮೀಪದ ಕೆಳಪರ್ಕಳದಲ್ಲಿ ಗ್ರಾನೈಟ್ ತುಂಬಿದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್‌ನಲ್ಲಿ ಇದ್ದ ಹಲವು ವಾಹನಗಳ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಲ್ಲಿದ್ದ ಸ್ಥಳೀಯರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ನಿಯಂತ್ರಣ ಕಳೆದುಕೊಂಡ ಗ್ರಾನೈಟ್ ತುಂಬಿದ ಲಾರಿ, ಗಣಪತಿ ನಾಯಕ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ವೇಳೆ ದುರಸ್ತಿಗೆ ಬಂದಿದ್ದ ನಾಲೈದು ವಾಹನಗಳು ಲಾರಿಯಡಿಗೆ ಬಿದ್ದಿವೆ. ಇದೇ ವೇಳೆ ಸ್ಥಳೀಯರಾದ ಸರ್ವೋತ್ತಮ ಅಮೀನ್ ಎಂಬವರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Oplus_131072

ಲಾರಿ ಬೆಂಗಳೂರಿನಿಂದ ಪರ್ಕಳ ಸಮೀಪದ ಹೆರ್ಗಾದಲ್ಲಿರುವ ಮನೆಗೆ ಗ್ರಾನೈಟ್ ತುಂಬಿಕೊಂಡು ಬಂದಿತ್ತು. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಏರುದಿಣ್ಣೆ ಹತ್ತಲಾಗದೆ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ರಸ್ತೆಯಲ್ಲಿ ಈ ಹಿಂದೆ ಕೂಡ ಹಲವು ವಾಹನಗಳು ಏರು ರಸ್ತೆ ಹತ್ತಲಾಗದೆ ಹಿಮ್ಮುಖವಾಗಿ ಚಲಿಸಿ ಅಪಘಾತಗಳು ಸಂಭವಿಸಿದ್ದವು. ತಕ್ಷಣ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ,ಈ ರಸ್ತೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರಾದ ಗಣೇಶರಾಜ್ ಸರಳಬೆಟ್ಟು ಒತ್ತಾಯಿಸಿದ್ದಾರೆ.