ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್! ಸ್ಥಳೀಯರಿಂದ ಅಡ್ಡಿ, ಯುವತಿಯ ಆಕ್ರೋಶ

ಉಡುಪಿ: ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬರ ಬಿಕಿನಿ ಫೋಟೋಶೂಟ್ ಈಗ ವಿವಾದದ ಸ್ವರೂಪ ಪಡೆಯುತ್ತಿದೆ. ಈ ಯುವತಿ ಫೋಟೋಶೂಟ್ ಮಾಡುತ್ತಿರುವಾಗ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಸ್ವತಃ ಯುವತಿ ಆರೋಪಿಸಿದ್ದಾರೆ.

ತನ್ನ ಇನ್ ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ಮಾಹಿತಿಯನ್ನು ಯುವತಿ ಹಂಚಿಕೊಂಡಿದ್ದಾರೆ.

ಈಕೆ ಹೊರರಾಜ್ಯದ ಮಾಡೆಲ್ ಎನ್ನಲಾಗಿದೆ. ನೈತಿಕ ಪೊಲೀಸ್‌ ಗಿರಿ ನಡೆಸಲು ಸ್ಥಳೀಯರು ಯಾರು? ಬೀಚ್ ಸಾರ್ವಜನಿಕ ಪ್ರದೇಶದಲ್ಲಿ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಎಂದು ಜಾಲತಾಣದಲ್ಲಿ ಯುವತಿ ಪ್ರಶ್ನೆ ಮಾಡಿದ್ದಾಳೆ.