ನಾಳೆ ಉಡುಪಿಯಲ್ಲಿ ‘ಚೋಯ್ಸ್ ಗೋಲ್ಡ್’ ಚಿನ್ನಾಭರಣದ ನೂತನ ವಿಶಾಲ ಮಳಿಗೆ ಶುಭಾರಂಭ; ಉದ್ಘಾಟನೆ ದಿನ ಗ್ರಾಹಕರಿಗೆ ಆಫರ್’ಗಳ ಸುರಿಮಳೆ

ಉಡುಪಿ: ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಸಾಂಪ್ರದಾಯಿಕ ಆಭರಣಗಳಿಗೆ ಹೆಸರುವಾಸಿಯಾಗಿರುವ ‘ಚೋಯ್ಸ್ ಗೋಲ್ಡ್’ ಚಿನ್ನಾಭರಣದ 7ನೇ ವಿಶಾಲವಾದ ನೂತನ ಮಳಿಗೆ ನಾಳೆ(ಡಿಸೆಂಬರ್ 2ರಂದು) ಉಡುಪಿಯ ಜಾಮಿಯಾ ಮಸೀದಿ ರಸ್ತೆಯ ಮಾರುತಿ ವೀಥಿಕಾದ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಮಂಗಳೂರು, ಮುಡಿಪು, ವಿಟ್ಲಾ, ಮಜರ್ಪಲ್ಲ(ಕೇರಳ) , ಸೀತಂಗೋಳಿ(ಕೇರಳ), ಸೇರಿದಂತೆ 6 ಕಡೆಗಳಲ್ಲಿ ತನ್ನ ವಿಶಾಲವಾದ ಮಳಿಗೆಯನ್ನು ಹೊಂದಿರುವ ‘ಚೋಯ್ಸ್ ಗೋಲ್ಡ್’, ಇದೀಗ ಉಡುಪಿಯ ಗ್ರಾಹಕರಿಗೆ 100%ರಷ್ಟು 916 BIS-HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ, ವಿವಿಧ ಬ್ರಾಂಡಿನ ವಾಚ್’ಗಳ ವಿಶಾಲ ಸಂಗ್ರಹದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.
ದಶಮಾನೋತ್ಸವ ಆಚರಿಸುತ್ತಿರುವ ‘ಚೋಯ್ಸ್ ಗೋಲ್ಡ್’, ಕಳೆದ 10 ವರ್ಷಗಳಿಂದ ಗುಣಮಟ್ಟದ ಚಿನ್ನಕ್ಕೆ ಖ್ಯಾತಿ ಗಳಿಸಿದ್ದು, ಉಡುಪಿಯಲ್ಲಿ ತನ್ನ ವಿಶಾಲವಾದ ನೂತನ ಮಳಿಗೆಯಾ ಶುಭಾರಂಭದ ಹಿನ್ನೆಲೆಯಲ್ಲಿ ಆಫರ್’ಗಳ ಸುರಿಮಳೆಗೈಯ್ಯಲು ಸಿದ್ಧವಾಗಿದೆ.
ಉದ್ಘಾಟನೆ ದಿನದಂದು ಆಫರ್’ಗಳ ಸುರಿಮಳೆ….
ಡಿಸೆಂಬರ್ 2ರಂದು ಶುಭಾರಂಭದ ಪ್ರಯುಕ್ತ ಬೇರೆ ಎಲ್ಲೂ ಸಿಗದ ಅವಕಾಶವಾಗಿ ಖರೀದಿಸುವ ಎಲ್ಲ ಚಿನ್ನಗಳ ಮೇಲಿನ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನಲ್ಲಿ 50%ರಷ್ಟು ಡಿಸ್ಕೌಂಟ್ ಸಿಗಲಿದೆ.
ಅದರಲ್ಲೂ ವಿಶೇಷವಾಗಿ ಮದುವೆ ಖರೀದಿಗೆ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನ ಮೇಲೆ 7.8%ರಷ್ಟು ವಿಶೇಷ ರಿಯಾಯಿತಿ ದೊರಕಲಿದೆ.

ಡೈಮಂಡ್ ಪರ್ ಕ್ಯಾರಟ್ ಜುವೆಲ್ಲರಿ ಖರೀದಿಗೆ ಗ್ರಾಹಕರಿಗೆ ಬರೋಬರಿ 21ಸಾವಿರ ಡಿಸ್ಕೌಂಟ್ ಸಿಗಲಿದೆ.
ಸ್ವರ್ಣ ನಿಧಿ ಸ್ಕೀಮಿಗೆ ಸೇರುವ ಗ್ರಾಹಕರಿಗೆ ಯಾವುದೇ ಮೇಕಿಂಗ್ ಚಾರ್ಜ್ ಇರದೇ ಚಿನ್ನಾಭರಣ ಸಿಗುತ್ತೆ.
ಉದ್ಘಾಟನೆ ದಿನ ಶೋರೂಮ್’ಗೆ ಭೇಟಿ ನೀಡುವ ಅದೃಷ್ಟವಂತ ಗ್ರಾಹಕರಿಗೆ ಪ್ರತಿ ಗಂಟೆಗೊಂದು ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶವೂ ಇದೆ.