ಉಡುಪಿ: ಉಡುಪಿಯ ಕೊಚ್ಚಿನ್ ಶಿಪ್ ಯಾರ್ಡ್ ದೇಶದ ಶಿಪ್ ಬಿಲ್ಡಿಂಗ್ ಕಂಪನಿಗಳಲ್ಲಿ ಮುಂಚೂಣಿಯಲ್ಲಿದೆ. ಹತ್ತು ದಿನಗಳ ಹಿಂದೆ ನಾರ್ವೆಗೆ ಒಂದು ಸರಕು ಸಾಗಾಣಿಕೆ ಹಡಗನ್ನು ಉಡುಪಿಯ ಮಲ್ಪೆ ಕಡಲ ತೀರದಿಂದ ರವಾನೆ ಮಾಡಲಾಗಿತ್ತು.
ನಾರ್ವೆಗೆ ಮತ್ತೆ ಎರಡು ಹೊಸ ಬೃಹತ್ ಹಡಗುಗಳನ್ನು ಸಿದ್ಧ ಮಾಡಲಾಗುತ್ತಿದೆ. ಮಂಗಳೂರಿನ ನವ ಬಂದರಿನ ಮೂಲಕ ಕೊಚ್ಚಿನ್ ಶಿಪ್ ಯಾರ್ಡ್ ಗೆ ಕಚ್ಚಾ ವಸ್ತುಗಳು, ಮೆಟಲ್ ಶೀಟ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ವರ್ಷದಲ್ಲಿ ಎರಡು ಹಡಗುಗಳನ್ನು ನಿರ್ಮಾಣ ಮಾಡಲು ನಾರ್ವೆ ಜೊತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ.