ಉಡುಪಿ:ಮಂಗಳೂರಿನ ದಿಗಂತ್ ನಾಪತ್ತೆ ಪ್ರಕರಣ ಕರಾವಳಿಯಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಆತ ನಾಪತ್ತೆಯಾಗಿ ಹನ್ನೆರಡು ದಿನಗಳ ಬಳಿಕ ಉಡುಪಿಯ ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಪತ್ತೆಯಾಗಿದ್ದ. ಪೊಲೀಸರ ಕೈಗೆ ದಿಗಂತ್ ಸಿಕ್ಕಿಬೀಳುವ ಮುನ್ನ ಆತನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಡಿಮಾರ್ಟ್ ನಲ್ಲಿ ದಿಗಂತ್ ಶಾಪಿಂಗ್ ಮಾಡುವ ಸಿ ಸಿ ಟಿ ವಿ ದೃಶ್ಯಾವಳಿ ಲಭ್ಯವಾಗಿದೆ. ಯಾವುದೇ ಆತಂಕ ಇಲ್ಲದೆ ಮಾಲ್ ನಲ್ಲಿ ಓಡಾಟ ಮಾಡುತ್ತಿರುವ ದಿಗಂತ್ ಕೊನೆಗೆ ಸಾಮಾನ್ಯನಂತೆ ಖರೀದಿ ಮಾಡಿ ಬಿಲ್ ಪಾವತಿಸುವ ದೃಶ್ಯ ದಾಖಲಾಗಿದೆ. ಈ ದೃಶ್ಯ, ಆತ ಪರೀಕ್ಷೆಯ ಆತಂಕದಿಂದ ಮನೆ ಬಿಟ್ಟು ಹೋಗಿರುವ ಸಂಶಯಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಇದೇ ಸಮಯದಲ್ಲಿ ಅಲ್ಲಿಯ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಸುಪರ್ದಿಯಲ್ಲಿರುವ ದಿಗಂತ್ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಪೋಷಕರನ್ನು ಸೇರಿಕೊಳ್ಳಲಿದ್ದಾನೆ.












