ಉಡುಪಿ: ಜರ್ಮನಿ ಸರ್ಕಾರದಿಂದ ಮಾನ್ಯತೆ
ಪಡೆದಿರುವ M/S Talent Orange ಸಂಸ್ಥೆಯ ವತಿಯಿಂದ ಭಾರತ ದೇಶದಿಂದ ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿ.ಎಸ್ಸಿ ಹಾಗೂ
ಜಿ.ಎನ್.ಎಮ್ ವಿದ್ಯಾರ್ಹತೆ ಹೊಂದಿರುವ ೩೮ ವರ್ಷದೊಳಗಿನ ಹೊಸಬರು, ಅನುಭವಿಯುಳ್ಳ ಮಹಿಳೆಯರು ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಈ ಸಂಸ್ಥೆಯು ಸದರಿ ವಿದ್ಯಾರ್ಹತೆ ಹೊಂದಿರುವ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ ೦೮ ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಲಿದೆ. ಸಂಸ್ಥೆಯ ವತಿಯಿಂದ
ಊಟದ ವ್ಯವಸ್ಥೆ ಹಾಗೂ ಉಚಿತ ವಸತಿ ಸೌಲಭ್ಯ ನೀಡುವುದಲ್ಲದೇ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಒದಗಿಸುವುದಾಗಿ ತಿಳಿಸಿದೆ.
ಭಾರತೀಯ ನರ್ಸಿಂಗ್ ಲೈಸನ್ಸ್ ಹೊಂದಿರುವುದು
ಕಡ್ಡಾಯವಾಗಿದ್ದು, ಮಹಿಳಾ ಅಭ್ಯರ್ಥಿಗಳು ಚಿಕ್ಕ ಮಕ್ಕಳನ್ನು ಹೊಂದಿದ್ದಲ್ಲಿ, ತಮ್ಮೊಂದಿಗೆ ಕರೆದೊಯ್ಯುವ ಅವಕಾಶವಿರುವುದಿಲ್ಲ.ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕರಾದ ಈಗಾಗಲೇ ನರ್ಸಿಂಗ್
ಪೂರ್ಣಗೊಳಿಸಿದ ಉದ್ಯೋಗಾಂಕ್ಷಿಗಳು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳ ಕಛೇರಿ, ಎ ಬ್ಲಾಕ್, ೧ನೇ ಮಹಡಿ, ಕೊಠಡಿ ಸಂಖ್ಯೆ -೨೦೧ ರಜತಾದ್ರಿ, ಮಣಿಪಾಲ, ಉಡುಪಿ ಅಥವಾ ಸಮೀಪದ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.