ನರ್ಸರಿ / ಮಾಂಟೆಸ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್‍ಗೆ ಅರ್ಜಿ ಆಹ್ವಾನ

ಉಡುಪಿ/ಮಣಿಪಾಲ: ಕಳೆದ ಒಂದು ದಶಕದಿಂದಲೂ ಪ್ರತಿಷ್ಠಿತ ಸಂಸ್ಥೆಯಾಗಿ ಜನಪ್ರಿಯವಾಗಿರುವ ‘ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸಿಗೆ ದಾಖಲಾತಿ ಆರಂಭವಾಗಿದೆ. 600ಕ್ಕೂ ಮೇಲ್ಪಟ್ಟು ಮಹಿಳೆಯರು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ದೇಶ-ವಿದೇಶಗಳಲ್ಲಿ ಉದ್ಯೋಗ ಪಡೆದಿದ್ದಾರೆ ಹಾಗೂ ಕೆಲವರು ತಮ್ಮದೇ ಆದ ಪೂರ್ವಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದಾರೆ.

ಭಾರತ ಸರಕಾರದ ನಿರುದ್ಯೋಗ ನಿರ್ಮೂಲನ ಪ್ರಕ್ರಿಯೆಯಡಿಯಲ್ಲಿ ಕೆಲಸ ಮಾಡುತ್ತಿರುವ ಭಾರತ್ ಸೇವಕ್ ಸಮಾಜ್‍ದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ 2025-26 ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಆಸಕ್ತರು ಸಂಸ್ಥೆಯಿಂದ ಅರ್ಜಿ ನಮೂನೆ ಪಡೆದು ಶ್ರೀ ಶಾರದಾ ಟೀಚರ್ ಟ್ರೈನಿಂಗ್, ಡಿ.ಸಿ.ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಯಲ್ಲಿರುವ ಸಂಸ್ಥೆಯಲ್ಲಿ (9901722527/[email protected]) ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿರುತ್ತದೆ.