ಉಡುಪಿ: ಧ್ಯಾನ, ಯೋಗ, ಕ್ರೀಡೆ ಹಾಗೂ ಉತ್ತಮ ಹವ್ಯಾಸಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಪ್ರೊ. ಭಾಸ್ಕರ್ ಎಸ್ ಶೆಟ್ಟಿ ಅಭಿಪ್ರಾಯಪಟ್ಟರು.
ಇವರು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಪಿ.ಜಿ, ಎ.ವಿ ಸಭಾಂಗಣದಲ್ಲಿ ಮನ:ಶಾಸ್ತ್ರ ವಿಭಾಗ, ಆಂಗ್ಲ ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ‘ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ’ ಎಂಬ ವಿಷಯದ ಕುರಿತು ಹಮ್ಮಿಕೊಂಡ ಪ್ಯಾನಲ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ಯಾನಲ್ ಚರ್ಚೆಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜ್ಙಾ ಕ್ರಿಷ್ಣನ್ ಉಪನ್ಯಾಸಕಿ, ಸೋಶಿಯಲ್ ವರ್ಕ್ ವಿಭಾಗ ಡಾ. ಎಮ್.ವಿ ಶೆಟ್ಟಿ ವೃತಿಪರ ವಿಜ್ಞಾನ ಮತ್ತು ನಿರ್ವಹಣಾ ಸಂಸ್ಥೆ ಮಂಗಳೂರು, ಶ್ರೀಮತಿ ಅಪೂರ್ವ ಶಿಕ್ಷಕರು ಉಡುಪಿ, ಶ್ರೀಮತಿ ರಾಧಿಕ ವಕೀಲರು ಮಂಗಳೂರು, ಪ್ರಥ್ವಿ ನಾಯ್ಕ್ ಕಿರಿಯ ಸಂಶೋಧನಾ ವಿದ್ಯಾರ್ಥಿ ಮಣಿಪಾಲ, ಶ್ರೀಮತಿ ಸ್ಪೂರ್ತಿ ಸಹಾಯಕ ಸಂಶೋಧಕಿ ನೆಫ್ರೋಲಾಜಿ, ಕೆ.ಎಮ್.ಸಿ ಮಣಿಪಾಲ ಮತ್ತು ರೀಶಲ್ ನೋಲಾ ಡೆಮಿಲೊ, ವಿದ್ಯಾರ್ಥಿನಿ ಜೈನ್ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ಉಪಸ್ಥಿತರಿದ್ದರು. ಪ್ಯಾನಲ್ ಚರ್ಚೆಯ ಮಾಡರೇಟರಾಗಿ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥರು ಶ್ರೀ ಸೋಜನ್ ಕೆ.ಜಿ ಇವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನ, ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಶ್ರೀಮತಿ ಅಡಿಗ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಮನ:ಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ವಾಣಿ ಆರ್ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕು. ಪ್ರೀತಿ ತೃತೀಯ ಬಿ.ಎ ಕಾರ್ಯಕ್ರಮವನ್ನು ನಿರೂಪಿಸಿದರು. ಮನ:ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕು. ರಮ್ಯ ವಂದಿಸಿದರು.