ಉಡುಪಿ: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕಾರ್ಕಳ ತಾಲೂಕಿನ ದುರ್ಗಾ ಫಾಲ್ಸ್ ಧುಮ್ಮುಕಿ ಹರಿಯುತ್ತಿದೆ.
ಸ್ವರ್ಣ ನದಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಲು ಕೊರಕಲ್ಲುಗಳ ಮಧ್ಯೆ ಹರಿದು ಸಾಗುವ ಹಿನ್ನೆಲೆಯಲ್ಲಿ ಇಲ್ಲಿ ನೈಸರ್ಗಿಕವಾಗಿ ಜಲಪಾತ ಸೃಷ್ಟಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಗಾ ಫಾಲ್ಸ್ ಕುರಿತು ವಿಡಿಯೋ ಮತ್ತು ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಸದ್ಯ ಇಲ್ಲಿ ಪ್ರವಾಸಿಗ ದಂಡು ದಂಡಾಗಿ ಬರುತ್ತಿದ್ದಾರೆ. ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿರುವ ದುರ್ಗಾ ಫಾಲ್ಸ್ ನೋಡಲು ಎಷ್ಟು ಸುಂದರವಾಗಿ ಕಾಣಿಸುತ್ತದೆ ಅಷ್ಟೇ ಅಪಾಯಕಾರಿಯಾಗಿದೆ. ಇಲಿ ಬಹುತೇಕ ಸ್ಥಳೀಯ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಂದು ಮೋಜು-ಮಸ್ತಿ ಮಾಡುವುದರ ಜೊತೆಗೆ ರೀಲ್ಸ್ ಮತ್ತು ಸೆಲ್ಫಿ ತೆಗೆದುಕೊಳ್ಳಲು ನೀರಿಗೆ ಹೇಳುತ್ತಿರುವುದು ಕಂಡುಬಂದ ಬಳಿಕ ದುರ್ಗಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿಗಳು ಇಲ್ಲಿ ಪ್ರತಿನಿತ್ಯ ಫಾಲ್ಸ್ ಕಾವಲು ಕಾಯುವ ಪರಿಪಾಠ ಮಾಡಿಕೊಂಡಿದ್ದಾರೆ. ಫಾಲ್ಸ್ ನೋಡಲು ಬರುವವರು ಕೇವಲ ಫಾಲ್ಸ್ ಅನ್ನು ನೋಡಿ ತೆರಳಲು ವಿನಂತಿಸಿಕೊಳ್ಳುತ್ತಿರುವ, ದುರ್ಗಾ ಗ್ರಾಮ ಪಂಚಾಯತ್ ನೀರಿಗೆ ಇಳಿಯದಂತೆ ಪ್ರವಾಸಿಗರಿಗೆ ಮನವಿ ಮಾಡಿದೆ.