ತ್ರಿಶಾ ವಿದ್ಯಾ ಪಿಯು ಕಾಲೇಜು: ಕೆಸರಡೊಂಜಿ ದಿನ ಕಾರ್ಯಕ್ರಮ.

ಉಡುಪಿ: ವಿದ್ಯಾರ್ಥಿಗಳಲ್ಲಿ ಈ ನೆಲದ ಸತ್ವ ವಿಚಾರಗಳ ಅರಿವು ಮೂಡಿಸುವುದಕ್ಕೆ, ಕೃಷಿಯ ಬಗ್ಗೆ ಒಲವು ಹೆಚ್ಚಿಸುವುದಕ್ಕೆ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಕೆಸರಡೊಂಜಿ ದಿನ ಕಾರ್ಯಕ್ರಮವನ್ನು ಜುಲೈ 20 ರಂದು ಆಯೋಜಿಸಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳು ಒಂದಷ್ಟು ಆಟಗಳ ಜೊತೆಗೆ ಈ ನೆಲದ ಕೃಷಿಯನ್ನು ಉಳಿಸುವುದರ ಕುರಿತಾದ ಮಹತ್ವವನ್ನು ಅರಿತರು.

ಈ ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ ಎ ಗೋಪಾಲಕೃಷ್ಣ ಭಟ್, ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ, ಕಾರ್ಯಕ್ರಮದ ಸಂಯೋಜಕರಾದ ಕನ್ನಡ ಪ್ರಾಧ್ಯಾಪಕರು ಧೀರಜ್ ಬೆಳ್ಳಾರೆ, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.