ಮಂಗಳೂರು: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ ಎ ಫೌಂಡೇಷನ್ ಮತ್ತು ಸಿ ಎ ಇಂಟರ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಿ ಎ ಇಂಟರ್ ಮಾಹಿತಿ ಕಾರ್ಯಗಾರವನ್ನು ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 8 ರಂದು ಆಯೋಜಿಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ ಕಾಯರ್ಕಟ್ಟೆ ಇವರು , ವಿದ್ಯಾರ್ಥಿಗಳು ಮುಂದಿನ ಹಂತಗಳನ್ನು ಉತ್ತಮ ತಯಾರಿಯೊಂದಿಗೆ ಪೂರ್ಣಗೊಳಿಸಬೇಕು. ಕಲಿಕೆಯೊಂದಿಗೆ ವೃತ್ತಿಪರತೆ ಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತ ಸಾಧಕರಿಗೆ ಶುಭಕೋರಿದರು. ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ ಕಾಮತ್ ಅವರು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.ನಂತರ ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆಯಾದ ಪ್ರೊ. ಯಶಸ್ವಿನಿ ಯಶ್ ಪಾಲ್ ಇವರು ನೂತನ ಇಂಟರ್ ವಿದ್ಯಾರ್ಥಿಗಳಿಗೆ ಸಿ ಎ ಇಂಟರ್ ಕೋರ್ಸಿನ ಬಗ್ಗೆ ಸಂಪೂರ್ಣ ಮಾಹಿತಿ, ಪರೀಕ್ಷಾ ತಯಾರಿಯ ಬಗ್ಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆದಿತ್ಯಾ ಜೆ. ಶೆಟ್ಟಿ ತರಗತಿ ನಿಯಮಗಳನ್ನು ವಾಚಿಸಿದರು. ಶಿವಾನಿ ಶೆಣೈ ನಿರೂಪಿಸಿ, ಶರಣ್ಯ ಸುರೇಶ್ ವಂದಿಸಿದರು.












