ಉಡುಪಿ: ಸತತ 25 ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯ ವತಿಯಿಂದ ಜುಲೈ 5 ರಿಂದ ಮಂಗಳೂರಿನಲ್ಲಿ ಸಿಎ ಫೌಂಡೇಶನ್ ತರಗತಿಗಳು ಆರಂಭವಾಗುತ್ತಿದೆ.
ರಾಷ್ಟ್ರದ ಬೇರೆ ಬೇರೆ ಭಾಗದ ಪ್ರಸಿದ್ಧ ಮತ್ತು ಅನುಭವಿ ವಿಷಯ ತಜ್ಞರಿಂದ ತರಬೇತಿ, ವಿದ್ಯಾರ್ಥಿಗಳಿಗೆ ಸ್ಟಡಿ ಮೆಟಿರಿಯಲ್ ಗಳೊಂದಿಗೆ ರಿವಿಷನ್ ಪುಸ್ತಕ, ಪರೀಕ್ಷಾ ಆಧಾರಿತ ರಿವಿಷನ್ ತರಗತಿಗಳು ಹಾಗೂ ಮಾಕ್ ಟೆಸ್ಟ್ ಸರಣಿ, ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಮೆಂಟರ್ ಶಿಪ್, ಮತ್ತು ಹಾಸ್ಟೆಲ್ ಸೌಲಭ್ಯ ಇವು ತರಗತಿಯ ವಿಶೇಷತೆಗಳಾಗಿವೆ.
ಆಸಕ್ತರು ಮಂಗಳೂರು ಅಳಕೆಯ ಶ್ರೀನಿಧಿ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿರುವ ತ್ರಿಶಾ ಕ್ಲಾಸಸ್ ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.