ತ್ರಿಶಾ ಕ್ಲಾಸಸ್ ಉಡುಪಿ ಸಿಎ ಫೌಂಡೇಶನ್ ಸಾಧಕರಿಗೆ ಸಮ್ಮಾನ;ಸಿಎ ಇಂಟರ್‌ಮೀಡಿಯಟ್ ಕಾಯಾಗಾರ

ಕಟಪಾಡಿ: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಮ್ಮಾನ ಹಾಗೂ ಸಿಎ ಇಂಟರ್‌ಮೀಡಿಯಟ್ ಮಾಹಿತಿ ಕಾರ್ಯಾಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಮಾರ್ಚ್ 9 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿ ಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅನಂತರ ಪ್ರಾಧ್ಯಾಪಕರಾದ ಆಲ್ಬನ್ ಆಂತೋನಿ ಅವರು ವಿದ್ಯಾರ್ಥಿಗಳಿಗೆ ಸಿಎ ಇಂಟರ್‌ಮೀಡಿಯಟ್ ಕೋರ್ಸ್‌ನ ಬಗ್ಗೆ ಹಾಗೂ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರು ನಾರಾಯಣ ರಾವ್‌,ತ್ರಿಶಾ ಸಂಸ್ಥೆಯ ಅಕಾಡೆಮಿಕ್ ಮ್ಯಾನೇಜರ್ ವರದರಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ನಿರೂಪಿಸಿದರು.