ಉಡುಪಿ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಭಾಗದಲ್ಲಿ ಮತ್ತೆ ಚಿರತೆಗಳ ಓಡಾಟ ಜೋರಾಗಿದೆ. ಗುರುವಾರ ತಡರಾತ್ರಿ ಉಳ್ತೂರು ರಸ್ತೆಯಲ್ಲಿ ಸಂಚರಿಸುತ್ತಾ ಕಾರಿನ ಡ್ಯಾಶ್ ಕ್ಯಾಮರದಲ್ಲಿ ಚಿರತೆ ಸಂಚಾರ ಸೆರೆಯಾಗಿದೆ.
ತೆಕ್ಕಟ್ಟೆಯ ಉಳ್ತೂರು ಪರಿಸರದಲ್ಲಿ ಈ ಮೊದಲಿನಿಂದಲೂ ಚಿರತೆ ಹಾವಳಿ ಅವ್ಯಾಹತವಾಗಿತ್ತು, ಸಾಕಷ್ಟು ಸಾಕು ಪ್ರಾಣಿಗಳ ಧಾಳಿ ನಡೆಸಿ ಹಾನಿ ಮಾಡಿದ ಘಟನೆಗಳು ನಡೆದಿದ್ದವು. ಸದ್ಯ ಮತ್ತೆ ಚಿರತೆಗಳ ಓಡಾಟ ಜೋರಾಗಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ತಡರಾತ್ರಿ ಉಳ್ತೂರು ಭಾಗದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚಿರತೆಯೊಂದು ರಸ್ತೆ ದಾಟುತ್ತಿರುವುದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರು ಆತಂಕಕ್ಕೀಡು ಮಾಡಿದೆ…












