ಜ.17- 21: ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ಬಬ್ಬುಸ್ವಾಮಿ, ಶ್ರೀ ಮೂಲ ಕ್ಷೇತ್ರದ ಜಾತ್ರಾ ಮಹೋತ್ಸವ ಜ.17ರಿಂದ
ಜ.21ರ ವರೆಗೆ ನಡೆಯಲಿದೆ.

ಹೊರೆ ಕಾಣಿಕೆ ಮೆರವಣಿಗೆ:
ಜ.17 ರಂದು ಹಸಿರು ಹೊರೆ ಕಾಣಿಕೆ ಮಂಗಳೂರಿನಿಂದ ಹೊರಟು ಮೂಲ್ಕಿ ಕಟಪಾಡಿ ಉಡುಪಿ ಮಾರ್ಗವಾಗಿ ಅಲ್ಲಲ್ಲಿ ಭಕ್ತಾದಿಗಳಿಂದ ಹೊರೆ ಕಾಣಿಕೆ ಸ್ವೀಕರಿಸಿ ಮಧ್ಯಾಹ್ನ 3.30ಕ್ಕೆ ಹಸುರು ಹೊರೆ ಕಾಣಿಕೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪಲಿದೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮೊಕ್ತಸರ ಬಿ.ಎನ್. ಶಂಕರ ಪೂಜಾರಿ, ಧಾರ್ಮಿಕ ಮುಖಂಡ ಪ್ರೇಮಾನಂದ ಶೆಟ್ಟಿ ಕಣ್ಣೀರೆ, ಬಾರಕೂರು ಗ್ರಾ.ಪಂ. ಅಧ್ಯಕ್ಷ ಶಾಂತಾ ರಾಮ ಶೆಟ್ಟಿ ಚಾಲನೆ ನೀಡುವರು.ಸಂಜೆ ಭಜನ ಸಂಕೀರ್ತನೆಯನ್ನು ನಗರಸಭೆ ಸದಸ್ಯ ವಿಜಯ ಕೊಡವೂರು ಉದ್ಘಾಟಿಸುವರು.

ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು:
ಜ.18ರ ಬೆಳಗ್ಗೆ ವಿವಿಧ ದರ್ಶನ ಸೇವೆ, ಸಾಮೂಹಿಕ ಆಶ್ಲೇಷಾ ಬಲಿ ನಡೆಯಲಿದೆ. ಸಂಜೆ ದೀಪೋತ್ಸವವನ್ನು
ಎಎಸ್‌ಐ ಜಯಕರ ಐರೋಡಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಸತೀಶ್‌ ಅಮೀನ್ ಉದ್ಘಾಟಿಸುವರು. ರಾತ್ರಿ 11ರಿಂದ ಗೆಂಡೋತ್ಸವ ಜರಗಲಿದೆ.

ಜ.19ರ ಬೆಳಗ್ಗೆ ಡಾ| ಗಣೇಶ್ ಗಂಗೊಳ್ಳಿ ತಂಡದಿಂದ ಭಕ್ತಿಸಂಗೀತ,ಸಾಮೂಹಿಕ ವಿವಾಹ,ಅನ್ನ ಸಂತರ್ಪಣೆ, ಸಭಾ
ಕಾರ್ಯಕ್ರಮ,ರಥೋತ್ಸವ, ತೆಪ್ಪೋತ್ಸವ ನಡೆಯಲಿದೆ.

ಜನವರಿ 20ಬೆಳಗ್ಗೆ ತುಲಾಭಾರ ಸೇವೆ,21ರ ಬೆಳಗ್ಗೆ ಕೊರಗಜ್ಜ ದರ್ಶನ ಸೇವೆ ಜರಗಲಿದೆ.ವರ್ಷಕೊಮ್ಮೆ ನಡೆಯುವ ಕೊರಗಜ್ಜ ದರ್ಶನಕ್ಕೆ ಹಲವು ಭಕ್ತಾದಿಗಳು ವಿವಿದೆಡೆಗಳಿಂದ ಆಗಮಿಸಿ ಕೃತಾರ್ಥರಾಗುತ್ತಾರೆ.

ಧಾರ್ಮಿಕ ಸಭೆ:
ಜ.19ರಂದು 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ| ವಿಶ್ವ ಸಂತೋಷ್, ಭಾರತಿ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ವಿಧಾನಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ ಅವರು ದೇಗುಲದ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆಯಲ್ಲಿ ಉದ್ಘಾಟಿಸುವರು.ಧರ್ಮದರ್ಶಿ ಗೋಕುಲ್‌ದಾಸ್‌ ಉಪಸ್ಥಿತರಿರುವರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಮುಂತಾದವರು ಭಾಗವಹಿಸುವರು.ಕರುಣಾಕರ ಮಾಸ್ತರ್ ಮಲ್ಪೆ ಮತ್ತು ಈಶ್ವರ್ ಮಲ್ಪೆ ಅವರಿಗೆ ಸಮಾಜ ಸೇವಾ
ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು ತಿಳಿಸಿದ್ದಾರೆ.

ರಂಗೇರಲಿದೆ ಕಚ್ಚೂರು ಶ್ರೀ ಮಾಲ್ತಿದೇವಿ ಜಾತ್ರಾ ಮಹೋತ್ಸವ: ಗೋಕುಲ್‌ದಾಸ್‌
ಕಾರಣಿಕ ಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ ಶ್ರೀ ಮಾಲ್ತಿದೇವಿ ಕ್ಷೇತ್ರಕ್ಕೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ.ಎಲ್ಲ ಸಮುದಾಯದವರ ಸಹಕಾರದೊಂದಿಗೆ ಪ್ರತಿ ವರ್ಷ ಉತ್ಸವ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ.ಈ ವರ್ಷದ ಉತ್ಸವಕ್ಕೆ ಸರ್ವರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ.
-ಗೋಕುಲ್‌ದಾಸ್‌ ಧರ್ಮದರ್ಶಿಗಳು, ಶಿವಪ್ಪ ನಂತೂರು, ಅಧ್ಯಕ್ಷರು, ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರ ಬಾರಕೂರು.

l