ಜ್ಞಾನಸುಧಾ: ಜೆ.ಇ.ಇ. ಮೈನ್ – 2024 ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, 35 ವಿದ್ಯಾರ್ಥಿಗಳಿಗೆ ಗೌರವ ಒಟ್ಟು 2.89 ಲಕ್ಷ ರೂ. ನಗದು ಪುರಸ್ಕಾರ ವಿತರಣೆ

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ 97 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾದ 35 ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ 2.89 ಲಕ್ಷ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಉಡುಪಿ ಜಿಲ್ಲೆಯಲ್ಲೇ 99.7ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಎಲ್ಲಾ 3 ವಿದ್ಯಾರ್ಥಿಗಳು ಜ್ಞಾನಸುಧಾದವರಾಗಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ.

99.7 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಮೂವರು ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು (99.7 ಪರ್ಸಂಟೈಲ್), ಬಿಪಿನ್ ಜೈನ್ ಬಿ.ಎಂ. (99.7 ಪರ್ಸಂಟೈಲ್,), ಚಿರಂತನ ಜೆ.ಎ. (99.7 ಪರ್ಸಂಟೈಲ್) ಇವರಿಗೆ ತಲಾ 50 ಸಾವಿರ ರೂಪಾಯಿಯನ್ನು, 99 ರಿಂದ 99.7 ಪರ್ಸಂಟೈಲ್ ಗಳಿಸಿದ ನಾಲ್ವರು ವಿದ್ಯಾರ್ಥಿಗಳಾದ ನಿಮೇಶ್ ಆರ್. ಆಚಾರ್ಯ (99 ಪರ್ಸಂಟೈಲ್), ಕ್ಷೀರಾಜ್.ಎಸ್ ಆಚಾರ್ಯ (99 ಪರ್ಸಂಟೈಲ್), ಶ್ರೀದ ಕಾಮತ್ (99 ಪರ್ಸಂಟೈಲ್) ಹಾಗೂ ರಿಷಿತ್ ವೇಣು ಬಿಳಿಮಗ್ಗ (99 ಪರ್ಸಂಟೈಲ್) ಇವರಿಗೆ ತಲಾ 25 ಸಾವಿರ ರೂಪಾಯಿಯೊಂದಿಗೆ ಸನ್ಮಾನಿಸಲಾಯಿತು.

ಜೊತೆಗೆ 98 ರಿಂದ 99 ಪರ್ಸಂಟೈಲ್ ಗಳಿಸಿದ 11 ವಿದ್ಯಾರ್ಥಿಗಳಾದ ಕ್ಷಮಾ ಜಯಚಂದ್ (98 ಪರ್ಸಂಟೈಲ್), ಎಂ.ಕೆ.ಮದನ್ ಗೌಡ (98 ಪರ್ಸಂಟೈಲ್), ಚಿನ್ಮಯ್ ಎಸ್. ದೇಶಪಾಂಡೆ (98 ಪರ್ಸಂಟೈಲ್), ದೇವಾಂಶ್ ದೀಪಕ್ ಬಿ. (98 ಪರ್ಸಂಟೈಲ್), ಗಜೇಂದ್ರ ಜಿ. (98 ಪರ್ಸಂಟೈಲ್), ರಿಯಾನ್ ಡಿ’ಸೋಜ (98ಪರ್ಸಂಟೈಲ್), ಸಮಿತ್ ಕೃಷ್ಣ. ಯು (98 ಪರ್ಸಂಟೈಲ್), ಪ್ರಥಮ್ ಕುಮಾರ್ ಶೆಟ್ಟಿ (98 ಪರ್ಸಂಟೈಲ್), ಖುಷಿ ಎಸ್ ಹೆಗ್ಡೆ (98 ಪರ್ಸಂಟೈಲ್), ಆಕಾಂಕ್ಷ್ ಎನ್ ಮಲ್ಯ (98 ಪರ್ಸಂಟೈಲ್), ಸಾತ್ವಿಕ್ ಜಿ. ಜೆ (98 ಪರ್ಸಂಟೈಲ್) ಇವರಿಗೆ ತಲಾ 2 ಸಾವಿರ ರೂಪಾಯಿಯೊಂದಿಗೆ ಪುರಸ್ಕರಿಸಲಾಯಿತು. ಹಾಗೆಯೇ 97 ರಿಂದ 98 ಪರ್ಸಂಟೈಲ್ ಗಳಿಸಿದ 17 ವಿದ್ಯಾರ್ಥಿಗಳನ್ನು ತಲಾ 1 ಸಾವಿರ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಜ್ಞಾನಸುಧಾದ 408 ವಿದ್ಯಾರ್ಥಿಗಳು ಜೆ.ಇ.ಇ ಮೈನ್ 2024 ರ ಮೊದಲ ಹಂತದ ಪರೀಕ್ಷೆ ಬರೆದಿದ್ದು 159 ವಿದ್ಯಾರ್ಥಿಗಳಿಗೆ 90 ಕ್ಕಿಂತ ಅಧಿಕ ಪರ್ಸಂಟೈಲ್, 78 ವಿದ್ಯಾರ್ಥಿಗಳಿಗೆ 95 ಕ್ಕಿಂತ ಅಧಿಕ ಪರ್ಸಂಟೈಲ್, 58 ವಿದ್ಯಾರ್ಥಿಗಳಿಗೆ 96 ಕ್ಕಿಂತ ಅಧಿಕ ಪರ್ಸಂಟೈಲ್, 35 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 18 ವಿದ್ಯಾರ್ಥಿಗಳಿಗೆ 98 ಕ್ಕಿಂತ ಅಧಿಕ ಪರ್ಸಂಟೈಲ್, 7 ವಿದ್ಯಾರ್ಥಿಗಳು 99 ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದಿರುತ್ತಾರೆ.

ಈ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಡಾ.ಮೋಹನ್ ಶೆಣೈ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪಿ.ಯು ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಉಡುಪಿ ಜ್ಞಾನಸುಧಾ ಪಿ.ಯು ಕಾಲೇಜು ಉಪಪ್ರಾಂಶುಪಾಲ ಸಂತೋಷ್, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕರಾದ ಸಂದೀಪ, ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ, ಪಿ.ಆರ್.ಓ. ಜ್ಯೋತಿ ಪದ್ಮನಾಭ್ ಬಂಡಿ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು, ನ್ಯೂಸ್ ಕಾರ್ಕಳ ಸಂಪಾದಕ ರಾಮಚಂದ್ರ ಬರೆಪ್ಪಾಡಿ, ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಾಧಕ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.