ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್‌ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಮಂಗಳೂರು: ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯ ಫಿಸಿಕ್ ನಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಮೂವರು ಹಾಗೂ ಕೆಮಿಸ್ಟ್ರಿಯಲ್ಲಿ ಓರ್ವ ವಿದ್ಯಾರ್ಥಿ ತಲಾ 100 ಪರ್ಸೆಂಟೈಲ್ ಪಡೆದು ಸಾಧನೆ ಮಾಡಿದ್ದಾರೆ.

ಮಿಹಿರ್ ಗಿರೀಶ್ ಕಾಮತ್99.9280 ಪರ್ಸೆಂಟೈಲ್ ಪಡೆದು ಅಖಿಲ ಭಾರತ ಮಟ್ಟದ ಜನರಲ್ ಕ್ಯಾಟಗರಿ ವಿಭಾಗದಲ್ಲಿ 1,312ನೇ ರ್ಯಾಂಕ್‌ ಪಡೆದರೆ, 99,7864 ಪರ್ಸಂಟೈಲ್ ಪಡೆದ ಸಂಕೇತ್ ಕುಮಾರ್ 3,541ನೇ ರ್ಯಾಂಕ್ ಹಾಗೂ 99.7100 ಪರ್ಸೆಂಟೈಲ್ ಪಡೆದ ರೋಹನ್ ಹೆಬ್ಬಾಲೆ 4,760ನೇ ರ್ಯಾಂಕ್ ಹಾಗೂ ಕೆಟಗರಿ 962 ರ್ಯಾಂಕ್ ಪಡೆದಿದ್ದಾರೆ.

ಪ್ರತೀಕ್ ಪಿ. ಗೌಡ ಕೆಮಿಸ್ಟ್ರಿಯಲ್ಲಿ 100 ಪರ್ಸೆಂಟೈಲ್ ಪಡೆದು ಒಟ್ಟು 99.5733ಪಡೆದರೆ, ಫಿಸಿಕ್ಸ್‌ನಲ್ಲಿ 100 ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳಾದ ಸುಜನ್ ಶಿವಾನಂದ ಮುಳ್ಳಟ್ಟಿ ಒಟ್ಟು 99.4584 ಪರ್ಸೆಂಟೈಲ್, ಸಂಜನ್ ಡಿ. ಒಟ್ಟು 99.4142 ಪರ್ಸೆಂಟೈಲ್ ಹಾಗೂ ಅನುರಾಗ್ ಜೀವಪ್ಪತಂಗಡಿ ಫಿಸಿಕ್ಸ್‌ನಲ್ಲಿ 100 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಸಂಸ್ಥೆಯ ಒಟ್ಟು 30 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ ಗಿಂತ ಅಧಿಕ ಅಂಕ ಪಡೆದಿದ್ದಾರೆ.

ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ 57 ವಿದ್ಯಾರ್ಥಿಗಳು 98 ಪರ್ಸೆಂಟೈಲ್ ಗಿಂತ ಅಧಿಕ, 110 ವಿದ್ಯಾರ್ಥಿಗಳು 97 ಪರ್ಸೆಂಟೈಲ್ ಗಿಂತ ಅಧಿಕ, 156 ವಿದ್ಯಾರ್ಥಿಗಳು 96 ಪರ್ಸೆಂಟೈಲ್ ಗಿಂತ ಅಧಿಕ, 192 ವಿದ್ಯಾರ್ಥಿಗಳು 95 ಪರ್ಸೆಂಟೈಲ್ ಗಿಂತ ಅಧಿಕ ಹಾಗೂ 363 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ ಗಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 469 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದಿದ್ದಾರೆ.

ಜನರಲ್ ಕ್ಯಾಟಗರಿಯ ಮೊದಲ 10 ಸಾವಿರ ರ್ಯಾಂಕ್ ಗಳಲ್ಲಿ ಹತ್ತು ರ್ಯಾಂಕ್ ಗಳನ್ನು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದರೆ, ನಾನಾ ಕ್ಯಾಟಗರಿ ವಿಭಾಗದಲ್ಲಿ ಮೊದಲ 1,000 ರ್ಯಾಂಕ್ ಗಳಲ್ಲಿ 9 ರ್ಯಾಂಕ್ ಗಳನ್ನು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಉಳಿದಂತೆ ಉತ್ಸವ್ ಆರ್ (99.6865), ಆದಿತ್ಯ ಆನಂದ (99.5770), ಪ್ರತೀಕ್ ಪಿ. ಗೌಡ (99.5733), ನಿಹಾರ್ ಎಸ್. ಆರ್ . (99.4927), ಸುಜನ್ ಶಿವಾನಂದ ಮುಳ್ಳಟ್ಟಿ(99.4584), ಸಂಜನ್ ಡಿ. (99.4142), ಅಮಿತ್ ಗೌಡ ಕೆ. (99.4069), ಸಂಜನಾ ಸಂತೋಷ ಕಟ್ಟಿ (99.3539), ಪ್ರೀತಮ್ ಕೆ.ಸಿ. (99.3469), ಶಾನ್ವಿನ್ ರಾಯ್ಸ್ ಪಿರೇರಾ (99.3376), ಆಕಾಶ್ ಶ್ರೀಶೈಲ್ ಕಂಕಣವಾಡಿ (99.3244), ಮಹಿಜ್ ಉಮರ್ (99.3101), ನಿತಿನ್ ಮಿನೇಜಸ್ (99.2695), ಲೋಚನ್ ಬಿ.ಎಚ್. (99.2481), ಅಮರ್ ಸಾಂಚಿ (99.2345), ಕಿಶನ್ ಗೌಡ ಎಸ್.ಪಿ. (99.2063), ಸಂಜೀವ್ ಆರ್. (99.2007), ಸರ್ವಜ್ಞಾ ಬಸವರಾಜ ಹುಬ್ಬಳ್ಳಿ (99.1815), ರಾಹುಲ್ ಎಂ. ಕಲ್ಲೋಳಿ (99.1659), ಅರ್ಜುನ್ ಕಿಶೋರ್ (99.1563), ಸಾಯಿ ಭೇಷಜ್ ಜಿ. (99.1386), ಚಿರಾಗ್ ಎಂ. ಯಲಿಗಾರ್ (99.1386), ಅನ್ವಿತ್ ಎಸ್. ಪಾಟೀಲ್ (99.1068), ಅಮನ್ ಅಬ್ದುಲ್ ಹಕೀಂ (99.1015). ಸುಹಾಸ್ ಎಂ (99.0801), ಗಗನ್ ಎಸ್.ಕೆ. (99,0604), ಗೌತಮ್ ಗೌಡ ಎಂ.ಜೆ. (99.0396) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್, ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.