ಜೆಇಇ ಮೈನ್ಸ್: ಎಕ್ಸ್ಪರ್ಟ್ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ವಿಷಯವಾರು 100 ಪರ್ಸೆಟೈಲ್

ಮಂಗಳೂರು:ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ಫಿಸಿಕ್ಸ್ ನಲ್ಲಿ ಹಾಗೂ ಓರ್ವ ಕೆಮೆಸ್ಟ್ರಿಯಲ್ಲಿ ತಲಾ 100 ಪರ್ಸೆಂಟೈಲ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಮನೀಶ್ ಎಲ್. ಫಿಸಿಕ್ಸ್ ನಲ್ಲ 100 ಪರ್ಸೆಂಟೈಲ್ ಪಡೆದು ಒಟ್ಟು 99.4178456 ಪರ್ಸೆಂಟೈಲ್, ಕೆ.ಆರ್. ಋತ್ವಿಕ್ ಫಿಸಿಕ್ಸ್ ನಲ್ಲಿ 100 ಪರ್ಸೆಂಟೈಲ್ ಪಡೆದು ಒಟ್ಟು 99.3686949 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ. ಅದೇ ರೀತಿ ಶಿವನ ಗೌಡ ಎಸ್. ಪಾಟೀಲ್, ಭುವನೇಶ್ ಎಂ.ವಿ. ಹಾಗೂ ಶ್ರೇಯಾ ಎಸ್. ಪಾಟೀಲ್ ಫಿಸಿಕ್ಸ್‍ನಲ್ಲಿ 100 ಪರ್ಸೆಂಟೈಲ್ ಹಾಗೂ ಸಫಲ್ ಎಸ್. ಶೆಟ್ಟಿ ಕೆಮೆಸ್ಟ್ರಿಯಲ್ಲಿ 100 ಪರ್ಸೆಂಟೈಲ್ ಪಡೆದಿದ್ದಾರೆ.
ಫೈನಲ್ ಹಂತದ ಜೆಇಇ ಪರೀಕ್ಷೆಯಲ್ಲಿ ಮಂಗಳೂರಿನ ವಳಚ್ಚಿಲ್ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್‍ಬೈಲ್ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ 31 ವಿದ್ಯಾರ್ಥಿಗಳು 99 ಪರ್ಸೆಂಟೈಲ್‍ಗಿಂತ ಅಧಿಕ, 83 ವಿದ್ಯಾರ್ಥಿಗಳು 98 ಪರ್ಸೆಂಟೈಲ್‍ಗಿಂತ ಅಧಿಕ, 123 ವಿದ್ಯಾರ್ಥಿಗಳು 97 ಪರ್ಸೆಂಟೈಲ್‍ಗಿಂತ ಅಧಿಕ, 170 ವಿದ್ಯಾರ್ಥಿಗಳು 96 ಪರ್ಸೆಂಟೈಲ್‍ಗಿಂತ ಅಧಿಕ, 206 ವಿದ್ಯಾರ್ಥಿಗಳು 95 ಪರ್ಸೆಂಟೈಲ್‍ಗಿಂತ ಅಧಿಕ ಹಾಗೂ 405 ವಿದ್ಯಾರ್ಥಿಗಳು 90 ಪರ್ಸೆಂಟೈಲ್‍ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.

ಅವನೀಶ್ ಬಿ. (99.9369812), ಲೋಹಿತ್ ಜಿ. (99.8847076), ಅನಿಕೇತ್ ಮಗಡಂ (99.7893477), ಯಶಸ್ ಯೋಗೀಂದ್ರ (99.7893477), ಕೆ. ರೆಹಾನ್ ಮೊಹಮ್ಮದ್ (99.7693996), ಸಾಯಿಶ್ ಶ್ರವಣ ಪಂಡಿತ್ (99.7665028), ಅಮೂಲ್ಯ ಕಾಮತ್ (99.7562652), ಯಶಸ್ ಪಾಟೀಲ್ ಜಿ. ಎಸ್.(99.7254513), ಕನ್ನಿಕಾ ಇ. (99.5524697), ವರುಣ್ ಸಿದ್ದಪ್ಪಗೌಡರ್ (99.5104146), ನಿಖಿಲ್ ಸೊನ್ನದ್ (99.4762336), ಪಾವನಿ ಶೆಟ್ಟಿ ಆರ್. (99.4732889), ತನುಷ್ ಗಿರೀಶ್ ಶಹಾಪುರಮಠ (99.4476147), ಸುಚಿತ್ ಪಿ. ಪ್ರಸಾದ್ (99.4455166), ಎಸ್.ಪಿ. ದುಶ್ಯಂತ್ ಜೈನ್ (99.4230876), ಮನೀಶ್ ಎಲ್. (99.4178456), ಸಿದ್ದೇಶ್ ಬಿ.ಡಮ್ಮಳ್ಳಿ (99.4102400), ಎಲ್. ಎನ್. ಸ್ಕಂದನ್ (99.4029796), ಪ್ರಜ್ವಲ್ ಭಟ್ (99.4023476), ಸೂರಜ್ ಸಿ.ಬೆಳಗೂರು (99.3730109), ಕೆ.ಆರ್. ರುಥ್ವಿಕ್ (99.3686949), ವಚನ್ ಎಲ್. ಎ. (99.3366396), ಧನುಷ್ ಎಚ್.ಎಲ್. (99.3329012), ಲಕ್ಷ್ಯ ಎಲ್. ಪೂಜಾರ್ (99.325753), ಅನನ್ಯ ರಾಘವೇಂದ್ರ ದೇವಾಡಿಗ (99.2342141), ಮನ್ವಿತ್ ವಿಶಾಲ್ ಎಸ್.ಆರ್. (99.1885351), ಕಾರ್ತಿಕೇಯ ಆರ್. ಮಯ್ಯ (99.1773389), ಎನ್.ಬಿ. ಸಾನಿಕಾ (99.1477612), ಚೇತನ್ ಕುಮಾರ್ ಕೆ.ಎಲ್. (99.1047785), ಅಕ್ಷತ್ ಕುಮಾರ್ ವಿಂಚೂರ್ಕರ್ (99.0790255), ವಾದಿರಾಜ್ ಜಿ. ಚಪ್ಪರ್ (99.0411319) ಅಂಕ ಪಡೆದಿದ್ದಾರೆ.

ಕ್ಯಾಟಗರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಜ್ಞಾ ಮಂಜುನಾಥಗೆ 115ನೇ ರ್ಯಾಂಕ್, ಧೀರಜ್ ಪಿ ಕರಿಶಿವಣ್ಣನವರ್‍ಗೆ 273ನೇ ರ್ಯಾಂಕ್, ಸಾಯಿ ಲಕ್ಷ್ಮೀನಾರಾಯಣನ್‍ಗೆ 378ನೇ ರ್ಯಾಂಕ್, ವಿಶಾಲ್ ಬಸವರಾಜ್ ಪವಾರ್ 570ನೇ ರ್ಯಾಂಕ್ ಹಾಗೂ ಶೋಬಿತ್ ಪ್ರಕಾಶ್‍ಗೆ 787ನೇ ರ್ಯಾಂಕ್ ದೊರೆತಿದೆ.

ರಾಜ್ಯ ಸರಕಾರ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಸಾಧನೆ ಅನಾರಣಗೊಂಡಿತ್ತು. ಇದೀಗ ಆರು ವಿದ್ಯಾರ್ಥಿಗಳು ವಿಷಯಾವಾರು 100 ಪರ್ಸೆಂಟೈಲ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‍ರವರು ಅಭಿನಂದಿಸಿರುತ್ತಾರೆ.