ನಿಟ್ಟೆ: ಭಾರತದ ಕಠಿಣ ಪರೀಕ್ಷೆಗಳಲ್ಲೊಂದಾದ ಜೆಇಇ ಅಡ್ವಾನ್ಸ್ಡ್ – ೨೦೨೪ ಫಲಿತಾಂಶವನ್ನು ಐಐಟಿ ಮದ್ರಾಸ್ ಭಾನುವಾರ ಪ್ರಕಟಗೊಳಿಸಿದ್ದು, ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ನಮನ್ ವಿ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ೨೭೫೩ ನೇ ರ‍್ಯಾಂಕ್ ಗಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿ.ಇ.ಟಿ ಪರೀಕ್ಷೆಯಲ್ಲಿ ೯೫ನೇ ರ‍್ಯಾಂಕ್ ಪಡೆದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಸಾಧನೆಯನ್ನೂ ಈ ವಿದ್ಯಾರ್ಥಿ ಮಾಡಿರುವರು. ಇವರ ಈ ಎರಡೂ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿರುವರು.