ಚಿಕ್ಕಮಗಳೂರು: ಪ್ಯಾಲೆಸ್ಟೈನ್ ಬಾವುಟ ಹಿಡಿದು ಬೈಕ್ ನಲ್ಲಿ ಸಂಚರಿಸುತ್ತಿದ್ದ 6 ಅಪ್ರಾಪ್ತ ಯುವಕರ ಬಂಧನ.

ಚಿಕ್ಕಮಗಳೂರು: ನಗರದಲ್ಲಿ ಪ್ಯಾಲೆಸ್ಟೈನ್ ಬಾವುಟ ಹಿಡಿದು ಎರಡು ಬೈಕ್‌ನಲ್ಲಿ ಆರು ಜನ ಅಪ್ರಾಪ್ತ ಯುವಕರು ಸಂಚರಿಸಿದ್ದು, ಸದ್ಯ ಅವರೆಲ್ಲರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಮಾಹಿತಿ ನೀಡಿದ್ದು ಭಾನುವಾರ ನಗರದ ದಂಟರಮಕ್ಕಿ ಕೆರೆ ಏರಿ ಮೇಲಿನ ರಸ್ತೆಯಲ್ಲಿ ಬಾವುಟ ಹಿಡಿದು ಫ್ರೀ ಪ್ಯಾಲೆಸ್ಟೈನ್ ಎಂದು ಘೋಷಣೆ ಕೂಗಿಕೊಂಡು ಬೈಕ್ ಮತ್ತು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರು. ಎಲ್ಲರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರೆಲ್ಲರೂ ಅಪ್ರಾಪ್ತರು. ಜತೆಗೆ ಬಾವುಟ ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ ಮಾಡಲಾಗುತ್ತದೆಯೇ? ಅಥವಾ ಈ ಯುವಕರಿಗೆ ಯಾರಾದರೂ ಸೂಚನೆ ನೀಡಿರಬಹುದು ಎಂಬ ಅಂಶಗಳ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ಯಾಲೆಸ್ಟೈನ್ ಧ್ವಜ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.