ಹೆಬ್ರಿ: ಹೆಬ್ರಿ ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡಮಿ ಹೆಬ್ರಿ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜನಮನ ಗೆದ್ದ ಚಾಣಕ್ಯ ದಶ ಸಂಭ್ರಮ -2024 ಸಾಂಸ್ಕೃತಿಕ ಉತ್ಸವ ಅದ್ದೂರಿ ತೆರೆಕಂಡಿತು.
ಪರಿಶ್ರಮದ ಸಂಭ್ರಮ – ಚಾರಾ ವಾದಿರಾಜ ಶೆಟ್ಟಿ:
ಪ್ರಮಾಣಿಕತೆಯೊಂದಿಗೆ ನಿರಂತರ ಪರಿಶ್ರಮದ ಮೂಲಕ ಕಳೆದ 10 ವರ್ಷಗಳಿಂದ ಗುಣಮಟ್ಟದ ಶಿಕ್ಷಣದ ಜತೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ನೀಡುತ್ತಿರುವ ಉದಯ್ ಕುಮಾರ್ ಶೆಟ್ಟಿ ದಂಪತಿಗಳ ನೇತೃತ್ವದಲ್ಲಿ ನಡೆಯುವ ಚಾಣಕ್ಯ ಸಂಸ್ಥೆಯ ಈ ವಾರ್ಷಿಕೋತ್ಸವ ಸಮಾರಂಭ ಕೇವಲ ದಶ ಸಂಭ್ರಮ ಅಷ್ಟೇ ಅಲ್ಲ ಪರಿಶ್ರಮದ ಸಂಭ್ರಮ ವಾಗಿದೆ
ಎಂದು ಉದ್ಯಮಿ ಚಾರ ವಾದಿರಾಜ ಶೆಟ್ಟಿ ಹೇಳಿದರು.
ಬದ್ಧತೆಯಿದ್ದಲ್ಲಿ ಯಶಸ್ಸು:
ಉದಯಕುಮಾರ್ ಶೆಟ್ಟಿ ಅವರು ಉತ್ತಮ ಉದ್ಯೋಗಾವಕಾಶದಲ್ಲಿದ್ದರೂ ಕೂಡ ಅದನ್ನು ಬಿಟ್ಟು ತನ್ನ ಹುಟ್ಟೂರಿನ ಸೆಳೆತದಿಂದ ಊರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಎಸ್.ಅರ್.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ್ ಶೆಟ್ಟಿ ಹೇಳಿದರು.
ಗುಣಮಟ್ಟದ ಶಿಕ್ಷಣ ಗುರಿ ಮುಟ್ಟಿಸುತ್ತದೆ:
ಗುಣಮಟ್ಟದ ಶಿಕ್ಷಣದ ಮೂಲಕ ಮನೆಮಾತಾದ ಚಾಣಕ್ಯ ಸಂಸ್ಥೆ ಕಲಿಕೆಯನ್ನು ಅಸಾಧ್ಯ ಎಂದು ಕೈಚೆಲ್ಲಿ ಕುಳಿತವರ ಬದುಕನ್ನು ಬದಲಾಯಿಸಿದೆ. ಎಷ್ಟೋ ಜನರ ಬದುಕಿನ ದಾರಿದೀಪವಾಗಿರುವ ಚಾಣಕ್ಯ ಸಂಸ್ಥೆಯ ಪರಿಶ್ರಮದಿಂದ ಇಂದು ದಶ ಸಂಭ್ರಮನ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಲ್ಲರ ಸಹಕಾರವೇ ದಶ ಸಂಭ್ರಮ – ಹೆಬ್ರಿ ಉದಯ್ ಕುಮಾರ್ ಶೆಟ್ಟಿ:
ಚಾಣಕ್ಯ ಎಜುಕೇಶನ್ ಮತ್ತು ಕಲ್ಚರ ಅಕಾಡೆಮಿ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಥೆ ಇಂದು 10 ವರ್ಷ ಪೂರೈಸಲು ಪೋಷಕರ ಸಹಕಾರ ಮತ್ತು ಮುಖ್ಯವಾಗಿ ಆತ್ಮೀಯರಾದ ಉದ್ಯಮಿ ವಾದಿರಾಜ್ ಶೆಟ್ಟಿ ಪ್ರೋತ್ಸಾಹ ಹಾಗೂ ವೇದಿಕೆ ಇರುವ ಎಲ್ಲಾ ಗಣ್ಯರ ಸಹಕಾರದಿಂದ ಸಾಧ್ಯವಾಯಿತು. ಕಳೆದ ಹತ್ತು ವರ್ಷಗಳಿಂದ ಗುಣಮಟ್ಟದ ಶಿಕ್ಷಣದ ಜೊತೆ ನಿತ್ಯಾನಂದ ಶೆಟ್ಟಿ ಅವರ ಸಹಕಾರದಿಂದ ಉಚಿತವಾಗಿ ಚೆಸ್ ತರಗತಿಯನ್ನು ನಡೆಸುತ್ತಾ ಬರುತ್ತಿದೆ. ಅಲ್ಲದೆ ಕಳೆದ ಎಂಟು ವರ್ಷಗಳಿಂದ ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿಯನ್ನು ನಮ್ಮ ಸಂಸ್ಥೆ ನೀಡಿದೆ. ಮುಂದೆ ಕೂಡ ಇಂತಹ ಹತ್ತು ಹಲವಾರು ಸಮಾಜಿಕ ಚಟುವಟಿಕೆಗಳ ಯೋಜನೆಯದ್ದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ಉದಯ ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು,ಅಮೃತ ಭಾರತಿ ಟ್ರಸ್ಟ್ ಹೆಬ್ರಿ ಇದರ ಸ್ಥಾಪಕ ಅಧ್ಯಕ್ಷ ಸತೀಶ್ ಪೈ,,ಅವಿಭಜಿತ ದ.ಕ.ಜವಳಿ ವರ್ತಕರ ಸಂಘ ಅಧ್ಯಕ್ಷ ಯೋಗೀಶ್ ಭಟ್,ಉದ್ಯಮಿ ಹರ್ಷ ಶೆಟ್ಟಿ,ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಪ್ರಾಂಶುಪಾಲ ಡಾ.ವಿದ್ಯಾಧರ್ ಹೆಗ್ಡೆ ,ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ , ಉದ್ಯಮಿ ಭಾಸ್ಕರ್ ಜೋಯಿಸ್,ತೀರ್ಥಹಳ್ಳಿ ಮಾಳೂರು ಸರಕಾರಿ ಪ್ರೌಢಶಾಲೆಯ ನಿವೃತ್ತ ಉಪ ಪ್ರಾಂಶುಪಾಲ ಗೋಪಾಲ ಶೆಟ್ಟಿ, ಪತ್ರಕರ್ತ ಮಂಜುನಾಥ್ ಭದ್ರಾವತಿ ಶುಭ ಹಾರೈಸಿದರು.
ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ ವರದಿ ವಾಚಿಸಿದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಹೆಬ್ರಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಮುದ್ರಾಡಿ ಪ್ರೌಢಶಾಲೆಯ ಆಂಗ್ಲ ಭಾಷೆ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ,ದೀಪಿಕಾ ಶೆಟ್ಟಿ ವಂದಿಸಿದರು.
ಚಾಣಕ್ಯ ಕಲಾರತ್ನ ಪ್ರಶಸ್ತಿ ಪುರಸ್ಕಾರ:
ಚಾಣಕ್ಯ ಸಂಸ್ಥೆಯಲ್ಲಿ ಕಲಾ ಪ್ರಕಾರದ ತರಬೇತಿಯ ಆರಂಭದ ಮೊದಲ ಗುರುವಾಗಿ ಸೇವೆ ಸಲ್ಲಿಸಿದ ಪ್ರಸ್ತುತ ಅಂತರಾಷ್ಟೀಯ ಮಟ್ಟದ ಚಿತ್ರಕಲಾವಿದರಾಗಿ ಗುರುತಿಸಿಕೊಂಡಿರುವ ಪುನೀತ್ ಎಸ್.ಮೈಸೂರು ಅವರಿಗೆ ಚಾಣಕ್ಯ ಕಲಾರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಾಧಕರಿಗೆ ಸನ್ಮಾನ:
ಚಾಣಕ್ಯ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಉಚಿತ ಚೆಸ್ ತರಗತಿಯನ್ನು ನಡೆಸಿ ಕೊಡುತ್ತಿರುವ
ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಚಾಣಕ್ಯ ಸಂಸ್ಥೆಯ ಸಮಾಜಕ್ಕೆ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಭಾರತೀಯ ಮಾನವ ಹಕ್ಕುಗಳ ಮಂಡಳಿ ರಾಜ್ಯಾಧ್ಯಕ್ಷ ಪ್ರಸಾದ್ ರೈ , ವಾಯ್ಸ್ ಆಪ್ ಚಾಣಕ್ಯ ಸಂಗೀತ ಸ್ಪರ್ಧೆ ಯಶಸ್ವಿಗೆ ನಿರಂತರ ಸಹಕರಿಸುತ್ತಿರುವ ಸಂಗೀತ ನಿರ್ದೇಶಕ ರಮೇಶ್ ಡಿ.ಚಾಂತಾರು,ಸಂಗೀತ ಶಿಕ್ಷಕಿ ಸ್ಮಿತಾ ಭಟ್ ಉಡುಪಿ, ಕಳೆದ ಏಳು ವರ್ಷಗಳಿಂದ ಸಂಗೀತ ಸ್ಪರ್ಧೆಯನ್ನು ಅತ್ಯುತ್ತಮವಾಗಿ ನಿರೂಪಣೆ ಮಾಡುತ್ತಿರುವ ನಿರೂಪಕಿ ದೀಪಿಕಾ ಶೆಟ್ಟಿ ಚಾರ,
ಉದ್ಯಮಿ ಶಶಿಕಾಂತ ಶೆಟ್ಟಿಗಾರ್ ,ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್ ಅವರನ್ನು ಚಾಣಕ್ಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸಮ್ಮಾನಿಸಲಾಯಿತು .
ವಿವಿಧ ಸ್ಪರ್ಧೆ ಬಹುಮಾನ ವಿತರಣೆ:
ಚಾಣಕ್ಯ ದಶ ಸಂಭ್ರಮದ ಅಂಗವಾಗಿ ಚಿತ್ರಕಲೆ, ಭರತನಾಟ್ಯ, ಫಿಲಂ ಡ್ಯಾನ್ಸ್, ಸಂಗೀತ ಸ್ಪರ್ಧೆ, ಚೆಸ್, ಕ್ಯಾರಂ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಜನಮನಾಗಿದ್ದ ಸಾಂಸ್ಕೃತಿಕ ವೈವಿಧ್ಯ:
ಹೆಬ್ರಿ ಶ್ರೀ ಅನಂತಪದ್ಮನಾಭ ಸನ್ನಿಧಿ ಸಭಾಭವನದದಲ್ಲಿ ಚಾಣಕ್ಯ ದಶ ಸಂಭ್ರಮದ ಅಂಗವಾಗಿ ಆಕರ್ಷಕ ದ್ವನಿ ಬೆಳಕಿನ ಸಂಯೋಜನೆಯ ಡಿಜಿಟಲ್ ವೇದಿಕೆಯಲ್ಲಿ ಚಾಣಕ್ಯ ಭರತನಾಟ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ವೈಭವ, ಚಾಣಕ್ಯ ಮೆಲೋಡಿಸ್ ತಂಡದಿಂದ ಸಂಗೀತ ರಸಮಂಜರಿ, ಚಾಣಕ್ಯ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಂದ ಡ್ಯಾನ್ಸ್ ಧಮಾಕ, ಚಾಣಕ್ಯ ಕರಾಟೆ ತರಬೇತಿ ಕೇಂದ್ರ ದ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ, ಚಾಣಕ್ಯ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಗಳಿಂದ ಗಾನಸುಧೆ, ಚಾಣಕ್ಯ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಸುಬ್ರಮಣ್ಯ ಪ್ರಸಾದ್ ಅವರ ನಿರ್ದೇಶನದಲ್ಲಿ ರುಕ್ಮಿಣಿ ಕಲ್ಯಾಣ ಯಕ್ಷಗಾನ ಪ್ರದರ್ಶನ, ಚಾಣಕ್ಯ ಭಾಗವತಿಗೆ ತರಬೇತಿ ಕೇಂದ್ರದದಿಂದ ಯಕ್ಷಗಾನ ಗಾನ ವೈಭವ, ವಾಯ್ಸ್ ಆಫ್ ಚಾಣಕ್ಯ ರಾಜ್ಯಮಟ್ಟದ ಸಂಗೀತ ಸಮರ ನಡೆಯಿತು. ವಾಯ್ಸ್ ಆಪ್ ಚಾಣಕ್ಯ ಸೀಸನ್ 6ರ ವಿಜೇತ ಯುಕ್ತ ಹೊಳ್ಳ ಕುಂದಾಪುರ ರಾಜ್ಯಮಟ್ಟದ ಸಂಗೀತ ಸಮರಕ್ಕೆ ಗಾಯನದ ಮೂಲಕ ಚಾಲನೆ ನೀಡಿದರು.
ಬಳಿಕ ವಾಯ್ಸ್ ಅಪ್ ಚಾಣಕ್ಯ 2024 ಸೀಜನ್ 7ರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೀರ್ಪರಾಗಿ ಸಂಗೀತ ನಿರ್ದೇಶಕ ರಮೇಶ್ ಡಿ ಚಾಂತರು, ಸಂಗೀತ ಗುರು ಸ್ಮಿತಾ ನಾಗರಾಜ್ ಭಟ್ ಉಡುಪಿ, ಹಿನ್ನೆಲೆ ಗಾಯಕ ಡಾ. ನಿತಿನ್ ಆಚಾರ್ಯ ಮಂಗಳೂರು ಭಾಗವಹಿಸಿದ್ದರು.
ಅಭಿಮಾನಿಗಳಿಂದ ಗೌರವ:
ಕಳೆದ ಹತ್ತು ವರ್ಷಗಳಿಂದ ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಿರುವ ಹಾಗೂ ಕಳೆದ ಒಂದು ವರ್ಷಗಳ ಕಾಲ ಕಂದ ಗೀತಾ ಗಾಯನದ ಮೂಲಕ ಸರಕಾರಿ ಶಾಲೆಗಳಲ್ಲಿ ಕನ್ನಡದ ಕಂಪನ್ನು ಪಸರಿಸುವುದರ ಜೊತೆಗೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಚಾಣಕ್ಯ ಸಂಸ್ಥೆಯ ರೂವಾರಿಗಳಾದ ಉದಯ್ ಕುಮಾರ್ ಶೆಟ್ಟಿ ಮತ್ತು ವೀಣಾ ಉದಯ್ ಕುಮಾರ್ ಶೆಟ್ಟಿ ಅವರನ್ನು ಚಾಣಕ್ಯ ಮೆಲೋಡಿಸ್ ತಂಡ ಹಾಗೂ ಅವರ ಅಭಿಮಾನಿಗಳು ಗೌರವಿಸಿದರು.
ನಿತ್ಯಾನಂದ ಭಟ್, ಹೆಬ್ರಿ ಜೇಸಿ ಅಧ್ಯಕ್ಷ ಸೋನಿ ಪಿ ಶೆಟ್ಟಿ, ಪ್ರಸನ್ನ ಮುನಿಯಾಲು,ಸುಬ್ರಮಣ್ಯ ಕಂಗಿನಾಯ, ರಘುರಾಮ್ ಶೆಟ್ಟಿ, ಪ್ರವೀಣ್ ಸೂಡ, ಯಕ್ಷಗಾನ ಗುರು ಸುಬ್ರಮಣ್ಯ ಪ್ರಸಾದ್, ಉಪನ್ಯಾಸಕಿ ಅಕ್ಷತಾ, ಭರತನಾಟ್ಯ ಗುರು ಧನ್ಯ ವೇಣೂರು, ನೃತ್ಯ ಗುರು ಹರೀಶ್, ಕರಾಟೆ ಗುರು ಸೋಮನಾಥ ಸುವರ್ಣ , ರಚಿತಾ ಕುಲಾಲ್, ಸಂಗೀತ ಶಿಕ್ಷಕಿ ಸವಿತಾ, ಚಾಣಕ್ಯ ಸಂಸ್ಥೆಯ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ವಿದ್ಯಾರ್ಥಿ ಪೋಷಕರು ಸಹಕರಿಸಿದರು.