ಉಡುಪಿ: ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಿಂದ ಸರ ಕಳವು ಮಾಡಿರುವ ಘಟನೆ ಕಾರ್ಕಳ ಮೂರು ಮಾರ್ಗದ ಬಳಿ ಸಂಭವಿಸಿದೆ.
ಮೂರು ಮಾರ್ಗದ ಬಳಿ ಇರುವ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ಓರ್ವ ಮಧ್ಯವಯಸ್ಕ ವ್ಯಕ್ತಿ ಬಂದು ಚಿನ್ನದ ಕರಿಮಣಿ ಸರವನ್ನು ತೋರಿಸುವಂತೆ ಹೇಳಿದ್ದಾನೆ. ಅದರಂತೆ ಕೆಲಸದಾಕೆ ಚಿನ್ನದ ಕರಿಮಣಿ ಸರವನ್ನು ನೋಡಲು ಕೊಟ್ಟಿದ್ದರು. ಕೆಲಹೊತ್ತು ಕೆಲಸದ ಹುಡುಗಿ ಜೊತೆ ಮಾತನಾಡಿದ ಆತ ಹುಡುಗಿ ನೋಡುತ್ತಿದ್ದಂತೆಯೇ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಹುಡುಗಿ ಕಳ್ಳ, ಕಳ್ಳ ಹಿಡೀರಿ ಅಂತ ಬೊಬ್ಬೆ ಹೊಡೆದಿದ್ದಾಳೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.