ಗಮನ ಸೆಳೆದ ಮಕ್ಕಳು ತಯಾರಿಸಿದ ಗಣೇಶನ ಮೂರ್ತಿಯ ವಿಸರ್ಜನ ಮೆರವಣಿಗೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಈ ಬಾರಿ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಯಿತು. ನಗರ, ಗ್ರಾಮೀಣ ಭಾಗದಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಊರವರೆಲ್ಲ ಸಂಭ್ರಮದಿಂದ ಪಾಲ್ಗೊಂಡರು. ಇನ್ನು ಕೆಲವೊಂದು ಕಡೆಗಳಲ್ಲಿ ಅದ್ಧೂರಿ ಶೋಭಯಾತ್ರೆಯ ಮೂಲಕ ಗಣಪತಿ ಮೂರ್ತಿಯ ವಿಸರ್ಜನೆ ಮೆರವಣಿಗೆ ನಡೆಯಿತು. ಆದರೆ ಉಡುಪಿಯ ಪಟ್ಲದಲ್ಲಿ ಮಕ್ಕಳೇ ತಯಾರಿ ಮಾಡಿದ ಗಣೇಶನ ಮೂರ್ತಿಯ ವಿಸರ್ಜನ ಮೆರವಣಿಗೆ ಎಲ್ಲರ ಗಮನ ಸೆಳೆದಿದೆ.

Oplus_0

ಹೌದು, ಉಡುಪಿಯ ಪಟ್ಲದ ಗಣಪತಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಯಾರಿಸಿದ ಗಣಪತಿ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇಂದು ಅದ್ಧೂರಿಯಾಗಿ ನಡೆಯಿತು.

ಕಳೆದ ವಾರ ಶಾಲೆಯಲ್ಲಿ ಮಕ್ಕಳಿಗಾಗಿ ಆವೆ ಮಣ್ಣಿನ ಕಲಾಕೃತಿಗಳ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಮಕ್ಕಳು ವಿವಿಧ ಗಣಪತಿ ವಿಗ್ರಹಗಳನ್ನು ತಯಾರಿಸಿದ್ದರು. ಆ ವಿಗ್ರಹಗಳ ಜಲಸ್ತಂಭನ ಶೋಭಾಯಾತ್ರೆ ಮೆರವಣಿಗೆ ವೈಭವದಿಂದ ಜರುಗಿತು. ಮಕ್ಕಳು ತಾವೂ ತಯಾರಿಸಿದ ಗಣೇಶ ಮೂರ್ತಿಯನ್ನು ಜೋಪಾನವಾಗಿ ಮೆರವಣಿಗೆ ಮೂಲಕ ತಂದು ಪಟ್ಲದ ಹೊಳೆಯಲ್ಲಿ ಜಲಸ್ತಂಭನ ಮಾಡಿದರು.