ಗಗನಯಾತ್ರಿ ಸುನೀತಾ ವಿಲಿಯಮ್ಸ್ ಗೆ ಶುಭಕೋರಿ ವಿಶಿಷ್ಟ ಕಲಾಕೃತಿ ರಚನೆ

ಉಡುಪಿ:9 ತಿಂಗಳು ಅಂತರಿಕ್ಷದಲ್ಲಿ ಸಾವು ಬದುಕಿನ ಹೋರಾಟ ಮಾಡಿ ಮತ್ತೆ ಭೂಮಿಗೆ ಬಂದ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರಿಗೆ ಶುಭಕೋರಿ ಉಡುಪಿಯ ಕಲಾವಿದರೊಬ್ಬರು ವಿಶಿಷ್ಟ ಕಲಾಕೃತಿ ರಚಿಸಿದ್ದಾರೆ.

ಅಶ್ವಥದ ಎಲೆಯ ಮೇಲೆ ಅಪರೂಪದ ಚಿತ್ರ ಮೂಡಿಸುವ ಮಹೇಶ್ ಮರ್ಣೆ ತಮ್ಮದೇ ವಿಭಿನ್ನ ರೀತಿಯಲ್ಲಿ ಅವರಿಗೆ ಶುಭಕೋರಿದ್ದಾರೆ. ಅಶ್ವತದ ಎಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ನಗುಮುಖ ಭಾವವನ್ನು ಮೂಡಿಸಿ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.

Oplus_131072