ಉಡುಪಿ: ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ ಅವರು ಉಡುಪಿ ಜಿಲ್ಲೆಯ ಕೋಟದಲ್ಲಿರುವ ಶಿವರಾಮ ಕಾರಂತ ಥೀಮ್ ಪಾರ್ಕಿಗೆ ಭೇಟಿ ನೀಡಿದರು.
ಶಿವರಾಮ ಕಾರಂತರ ಜೀವನ ಹಾಗೂ ಸಾಹಿತ್ಯದ ವಿಚಾರಗಳನ್ನು ನಾನಾ ಬಗೆಯಲ್ಲಿ ತಿಳಿಯಪಡಿಸುವ ಈ ಕೇಂದ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವರಾಮ ಕಾರಂತರ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪ್ರತಿ ವರ್ಷ ಶಿವರಾಮ ಕಾರಂತರ ಹೆಸರಲ್ಲಿ ಹುಟ್ಟೂರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಹಿಂದೆ ಎಸ್ಎಲ್ ಬೈರಪ್ಪ ಅವರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಎಲ್ ಬೈರಪ್ಪ ಅವರನ್ನು ಗೌರವಿಸಿದರು.












