ಕೊಲ್ಲೂರು: ತೆಲುಗು ಸಿನೆಮಾ ರಂಗದ ನಟ ಜೂನಿಯರ್ ಎನ್ಟಿಆರ್ ಅವರು ಸಕುಟುಂಬಿಕರಾಗಿ ಸೆ. 1ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಎನ್ಟಿಆರ್ ಅವರ ತಾಯಿ ಕುಂದಾಪುರ ಮೂಲದ ಶಾಲಿನಿ ಭಾಸ್ಕರ ರಾವ್, ಪತ್ನಿ, ರಿಷಬ್ ಶೆಟ್ಟಿ ದಂಪತಿ, ನಿರ್ದೇಶಕ ಪ್ರಶಾಂತ್ ನೀಲ್ ದಂಪತಿ, ನಟ ಪ್ರಮೋದ್ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.
ದೇಗುಲದ ವತಿಯಿಂದ ಸಮ್ಮಾನ
ಕಾರ್ಯನಿರ್ವಹಣಾ ಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ನಟರನ್ನು ದೇಗುಲದ ವತಿಯಿಂದ ಸಮ್ಮಾನಿಸಿದರು. ಆ ಬಳಿಕ ಜೂ. ಎನ್ಟಿಆರ್ ಕುಟುಂಬಿಕರು ವೀರಭದ್ರ ದೇವರು ಸಹಿತ ಪರಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೊಲ್ಲೂರು ಕ್ಷೇತ್ರದ ಮಹತ್ವವನ್ನು ಕೊಂಡಾಡಿದ ಜೂ. ಎನ್ಟಿಆರ್ ತಾಯಿಯ ಆಸೆಯಂತೆ ಉಡುಪಿ ಹಾಗೂ ಕೊಲ್ಲೂರು ದೇಗುಲ ಸಂದರ್ಶಿಸಿದೆ ಎಂದರು.