ಕುಂದಾಪುರ: ಮೂಡ್ಲಕಟ್ಟೆ ಕಾಲೇಜಿನಲ್ಲಿ ಓಣಂ ಆಚರಣೆ.

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಆವರಣದಲ್ಲಿ ಸೆ.13ರಂದು ಓಣಂ ಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರು ದೀಪ ಬೆಳಗಿಸುವ ಮೂಲಕ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓಣಂ ಹಬ್ಬದ ಸಾಂಪ್ರದಾಯಿಕ ನೃತ್ಯ, ಚಂಡೆ ವಾದ್ಯ, ಉಡುಗೆ, ತೊಡುಗೆ ಹೂವಿನ ರಂಗೋಲಿ ಗಮನ ಸೆಳೆದಿದ್ದು, ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್, ಐ ಎಂಜೇ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಹಾಗೂ ಐಎಂಜಿಐಎಸ್‌ಸಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಪ್ರತಿಭಾ ಎಂ ಪಾಟೀಲ್, ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಕುಮಾರಿ ಸಿನ್ಸಿ ಸ್ವಾಗತಿಸಿ, ಕು.ಆಸಿಫ್ ವಂದಿಸಿದರು. ಕು.ತೆಸ್ಕಾ ಮತ್ತು ಕು.ನಿತ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮಹತ್ವವನ್ನು ಶೆರಿಲ್ ಸಾರ, ಸೆಲಿನಾ ಹಾಗೂ ಗಾಯತ್ರಿ ವಿವಿಧ ಭಾಷೆಗಳಲ್ಲಿ ತಿಳಿಸಿದರು.

Oplus_0
Oplus_0