ಕುಂದಾಪುರ: ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ನಾಪತ್ತೆ.

ಗಂಗೊಳ್ಳಿ: ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾ ಖಾರ್ವಿ (32) ಅವರು ಆ. 12ರಂದು ಮನೆಯಿಂದ ಕೆಲಸಕ್ಕೆಂದು ಹೊರಟು ಹೋಗಿದ್ದವರು ಆ ಬಳಿಕ ನಾಪತ್ತೆಯಾಗಿದ್ದಾರೆ.

ಇವರು ಮಿಥುನ್‌ ಪುತ್ರನ್‌ ಅವರ ಪತ್ನಿಯಾಗಿದ್ದು, 12ರಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಹೊರಟು ಬಂದಿದ್ದು, ಸಂಜೆ ಪತಿ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಈ ಬಗ್ಗೆ ಮಳಿಗೆಯ ಮಾಲಕರಲ್ಲಿ ವಿಚಾರಿಸಿದಾಗ ಆ ದಿನ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದರು. ಆ. 13ರ ಬೆಳಗ್ಗೆ 11 ಗಂಟೆಗೆ ರೇಣುಕಾ ಅವರು ಸಹೋದರ ವಿನೋದ್‌ಗೆ ಕರೆ ಮಾಡಿ ಉಡುಪಿಯಲ್ಲಿರುವುದಾಗಿ ತಿಳಿಸಿದ್ದರು. ಆ ಬಳಿಕ ಮರಳಿ ಕೇಳಿದಾಗ ಬೆಂಗಳೂರಿನಲ್ಲಿದ್ದು, ನನ್ನನ್ನು ಹುಡುಕುವುದು ಬೇಡ ಎನ್ನುವುದಾಗಿ ತಿಳಿಸಿ, ಫೋನ್‌ ಸ್ವಿಚ್‌ ಆಫ್‌ ಮಾಡಿದ್ದರು.

ಪತಿ ಮಿಥುನ್‌ ಪುತ್ರನ್‌ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.