ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ನಕಲಿ ಚಿನ್ನ ಕೊಟ್ಟು ಹೊಸ ಚಿನ್ನ ಖರೀದಿಸಿ ಪರಾರಿಯಾದ ಘಟನೆ ಕುಂದಾಪುರ ನಗರದ ಅಪೂರ್ವ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ.
ಜ್ಯುವೆಲ್ಲರ್ಸ್ ಗೆ ಬಂದ ಮಹಿಳೆಯರು, ಹಳೆಯ ಚಿನ್ನ ಕೊಟ್ಟು ಹೊಸ ಚಿನ್ನ ಖರೀದಿ ಮಾಡಲು ಇದೆ ಎಂದು ಹೇಳಿದ್ದಾರೆ. ಅಂಗಡಿ ಮಾಲೀಕರು ಆ ಚಿನ್ನದಲ್ಲಿ ಹಾಲ್ ಮಾರ್ಕ್ ಪರೀಕ್ಷೆ ಮಾಡಲು ತಿಳಿಸಿದ್ದರು. ಬಳಿಕ ಮಹಿಳೆಯರ ಚಿನ್ನ ಪಡೆದು ಅವರಿಗೆ ಹೊಸ ಚಿನ್ನ ಕೊಟ್ಟು ಕಳುಹಿಸಿದ್ದರು. ಆದರೆ, ಮಹಿಳೆಯರು ಕೊಟ್ಟ ಚಿನ್ನ ಪರಿಶೀಲಿಸಿದಾಗ ಅದು ಬರಿ ತಾಮ್ರ ಎನ್ನುವುದು ತಿಳಿದುಬಂದಿದೆ. ಸುಮಾರು 2,50,000 ಲಕ್ಷ ರೂ. ಮೌಲ್ಯದ ಚಿನ್ನ ಪಡೆದುಕೊಂಡ ಚಾಲಾಕಿ ಮಹಿಳೆಯರು ಪರಾರಿಯಾಗಿದ್ದಾರೆ. ಗ್ರಾಹಕರ ಸೋಗಿನಲ್ಲಿ ಬಂದು ನಕಲಿ ಚಿನ್ನ ಕೊಟ್ಟು ಹೊಸ ಚಿನ್ನ ಖರೀದಿಸಿದ ಮಹಿಳೆಯರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ