ಕುಂದಾಪುರ: ಕುಂದಾಪುರ ಕುಲಾಲ ಸಂಘದ 34 ನೇ ವರ್ಷದ ಮಹಾಸಭೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ ಉಡುಪಿ ಚಿಕ್ಕ ಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಯ ಹಿಂದುಳಿದ ವರ್ಗಗಳ ಹಿರಿಯ ನಾಯಕ ಡಾ ಎಂ ಅಣ್ಣಯ್ಯ ಕುಲಾಲ್, ಸಂಘದ ಅಧ್ಯಕ್ಷ ವಿಶ್ವನಾಥ್ ಕುಲಾಲ್, ಮುಂತಾದವರು ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡಾ ಕೂಟ ಸ್ಪರ್ಧೆಯ ಬಹುಮಾನ ವಿತರಣೆ ಮಾಡಿ, ಯಾವುದೇ ಸಂಘಟನೆ ಬೆಳೆಯಬೇಕಾದರೆ ಹಿರಿಯರು ಮತ್ತು ಯುವಕರು ಸೇರಿ ಹಳೆ ಬೇರು ಮತ್ತು ಹೊಸ ಚಿಗುರಿನ ಮರದ ಹಾಗೆ ಬೆಳೆದು ಫಲ ನೀಡಬೇಕು.
ಕುಂದಾಪುರ ಕುಲಾಲ ಮಾತೃ ಸಂಘದ ವ್ಯಾಪ್ತಿಗೆ ಬೈಂದೂರು ಕುಂದಾಪುರ ವಿಧಾನ ಸಭೆ ಮಾತ್ರ ಅಲ್ಲದೇ ಬ್ರಹ್ಮಾವರ ಹೆಬ್ರಿ ತಾಲೂಕುಗಳ ಕೆಲವು ಗ್ರಾಮಗಳು ಇರುವುದುದರಿಂದ ಈ ಸಂಘಕ್ಕೆ ದೊಡ್ಡ ಜವಾಬ್ದಾರಿ ಇದೆ. 35 ವರ್ಷಗಳ ಇತಿಹಾಸ ಇರುವ ಈ ಸಂಘಕ್ಕೆ ರಾಜ್ಯದಲ್ಲೇ ಅತಿ ಬಲಿಷ್ಠ ಯುವಕರ ಮಹಿಳೆಯರ ಹಾಗು ಹಿರಿಯರ ಪಡೆ ಇದೆ. ಜೊತೆಗೆ ಡಾ ಎಂ ವಿ ಕುಲಾಲ್ ಕುಂದಾಪುರ ಅವರ ಬೆಂಗಾವಲು ಇದೆ ಅಂತ ಅಭಿಪ್ರಾಯ ಪಟ್ಟರು.
ನೂತನ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ, ತಜ್ಞ ವೈದ್ಯ ಡಾ ಸಂತೋಷ್ ಕುಲಾಲ್, ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕಾರ ಪಡೆದ ಸಂತೋಷ್ ಕುಮಾರ್, ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷರು ಕಾರ್ಯದರ್ಶಿ ಯಾಗಿ ಆಯ್ಕೆ ಆಗಿರುವ ಮಂಜುನಾಥ್ ಕುಲಾಲ್ ಜನ್ಸಾಲೆ ಮತ್ತು ಶಂಕರ ಕುಲಾಲ್ ಮೊಳಹಳ್ಳಿ ಯವರನ್ನ ಸನ್ಮಾನಿಸಲಾಯಿತು.
ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಜರುಗಿ ಯುವ ನಾಯಕ ಪ್ರಸ್ತುತ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಹಾಗೂ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಯವರನ್ನ ಕುಂದಾಪುರ ಕುಲಾಲ ಸಂಘದ ನೂತನ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಶ್ರೀಮತಿ ರೇಖಾ ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.