ಕುಂದಾಪುರ: ಅನಕೊಂಡ ಮಾದರಿಯ ಹೆಬ್ಬಾವು ಪ್ರತ್ಯಕ್ಷ; ಬೆಚ್ಚಿಬಿದ್ದ ಸ್ಥಳೀಯರು

ಉಡುಪಿ: ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಕುಂದಾಪುರ ತಾಲೂಕಿನ ಆನಗಳ್ಳಿ ಚಿಕ್ಕಮ್ಮ ದೇವಸ್ಥಾನದ ಮುಂಭಾಗದ ಬ್ರಿಜ್‌ ರಸ್ತೆಯಲ್ಲಿ ಈ ಭಯಾನಕ ದೃಶ್ಯ ಕಂಡುಬಂದಿದೆ.

ದೈತ್ಯ ಹೆಬ್ಬಾವು ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದು, ಆಹಾರದ ಬೇಟೆಯಾಡುತ್ತಿದ್ದಾಗ ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಅನಕೊಂಡ ಮಾದರಿಯ ದೈತ್ಯ ಹೆಬ್ಬಾವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ರಾತ್ರಿಯ ವೇಳೆ ರಸ್ತೆ ದಾಟುತ್ತಿದ್ದ ದೈತ್ಯಾಕಾರದ ಹೆಬ್ಬಾವಿನ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ ನಲ್ಲಿ ಸೆರೆಯಾಗಿದೆ. ಸದ್ಯ ಹೆಬ್ಬಾವಿನ ರಾತ್ರಿ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.