ಕುಂದಾಪುರ:ಮರು ಮೌಲ್ಯ ಮಾಪನದ ನಂತರ ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್ ಗಳಲ್ಲಿ ಒಟ್ಟು 13 ರ್ಯಾಂಕ್ ಗಳ ಸಂಭ್ರಮದಲ್ಲಿ ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜು.

ಕುಂದಾಪುರ : ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್ ಗಳಲ್ಲಿ 13 ರ್ಯಾಂಕ್ ಗಳನ್ನು ಪಡೆದುಕೊಂಡಿದೆ.

ವಿಜ್ಞಾನ ವಿಭಾಗದಲ್ಲಿ ವೈಷ್ಣವಿ ಅರಸ್ ( 595) ರಾಜ್ಯಕ್ಕೆ 5 ನೇ ರ್‍ಯಾಂಕ್ ,ಸುಮಿತ್ರಾ ಭಟ್ (593 ) 7ನೇ ರ್‍ಯಾಂಕ್, ಸನ್ನಿದಿ ಎಮ್ (592) 8 ನೇ ರ್‍ಯಾಂಕ್, ಅಮೂಲ್ಯ ಸಿ. ಶೆಟ್ಟಿ, ಕೀರ್ತನಾ, ರಂಜಿತಾ (591) 9 ನೇ ರ್‍ಯಾಂಕ್, ಅನನ್ಯ, ಚೈತ್ರಾ, ನಿಶಾ, ಸಾತ್ವಿಕ್( 590) 10 ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗ ದಲ್ಲಿ ವಿ. ದಿವೀಶ್ ಶೆಣೈ (592) 8 ನೇ ರ್‍ಯಾಂಕ್ , ಸಿಂಚನಾ ಸಿ. ಪೂಜಾರಿ (591) 9 ನೇ ರ್‍ಯಾಂಕ್, ಪ್ರಣವಿ ಉಳ್ಳೂರ ಕೆ (590) 10 ನೇ ರ್‍ಯಾಂಕ್ ಗಳನ್ನು ಪಡೆದಿರುತ್ತಾರೆ.
ಅಂಕದ ಷರತ್ತಿಲ್ಲದೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ದಾಖಲಾತಿ ಮಾಡಿಸಿಕೊಂಡು ಶೇ 100 ಫಲಿತಾಂಶ ದಾಖಲಿಸಿದೆ.

ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.