ಉಡುಪಿ: ಯುವ ಕಬ್ಬಡ್ಡಿ ಆಟಗಾರ ಮುಟ್ಲುಪಾಡಿ ನಡುಮನೆ ಪ್ರೀತಂ ಶೆಟ್ಟಿ(26) ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ.
ಅವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾಟಕ್ಕೆ ತೆರಳಿದ್ದರು. ಶುಕ್ರವಾರ ಕಬ್ಬಡಿ ಆಡಿದ ಕೆಲವೇ ಕ್ಷಣಗಳ ಬಳಿಕ ಪ್ರೀತಂ ಅವರು ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ತಂಡದ ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟೊತ್ತಿಗೆ ಆಗಲೇ ಪ್ರೀತಮ್ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರೀತಮ್ ಅವರು ಇನ್ನು ಕೆಲವೇ ದಿನಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ಎಲ್ಲಾ ತಯಾರಿ ನಡೆಸಿದ್ದರು. ಆದರೆ ವಿಧಿಯ ಕ್ರೂರ ಲೀಲೆಗೆ ಅವರು ಇಹಲೋಕ ತ್ಯಜಿಸಬೇಕಾಯಿತು. ಮೃತರು ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.