ಉಡುಪಿ: ಮನೆಯ ವಿದ್ಯುತ್ ಮೀಟರ್ಗೆ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಮೊರಾರ್ಜಿ ವಸತಿ ಶಾಲೆಯ ಬಳಿ ನಡೆದಿದೆ.
ಗಾಯಗೊಂಡವರನ್ನು ಸುಬ್ರಹ್ಮಣ್ಯ (18), ಸುರೇಶ್ (28) ಹಾಗೂ ಆನಂದ (25) ಎಂದು ಗುರುತಿಸಲಾಗಿದೆ.
ಇವರು ಮೂವರು ಮನೆಯಂಗಳದಲ್ಲಿ ಕುಳಿತಿದ್ದರು. ಈ ವೇಳೆ ಮನೆಯ ವಿದ್ಯುತ್ ಮೀಟರ್ಗೆ ಸಿಡಿಲು ಬಡಿದಿದ್ದು, ಇದರಿಂದ ಮೂವರು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮನೆಯ ಉಳಿದ ಸದಸ್ಯರು ಮನೆಯೊಳಗಿದ್ದ ಕಾರಣ ಅಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ.