ಕಾರ್ಕಳ: ತಾಲೂಕಿನ ಈದು ಗ್ರಾಮದ ವರಿಮಾರು ದರ್ಖಾಸು ಮನೆ ನಿವಾಸಿ ಶಿವಾನಂದ ಎಂಬವರ ಹೆಂಡತಿ ಅಶ್ವಿನಿ ಎಸ್. (28) ಏಳೂವರೆ ವರ್ಷದ ಮಗುವಿನ ಜೊತೆಗೆ ತಾಯಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ಹೊಸ್ಮಾರು ಅಡಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಶ್ವಿನಿ ಜೂ.11ರಂದು ಮಧ್ಯಾಹ್ನ 2.50ಕ್ಕೆ ಚಿಕ್ಕಮನ ಮಗಳು ರಶ್ಮಿತಾರಲ್ಲಿ ಮಂಗಳೂರಿನಲ್ಲಿರುವ ತಂಗಿ ಮೈನಾಳ ಮಗುವಿಗೆ ಹುಷಾರಿಲ್ಲದೆ ಇದ್ದು, ಮಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಕಿರಿಯ ಮಗ ಆಶಿಕ್ನನ್ನು ಕರೆದುಕೊಂಡು ಹೋದವರು ತಂಗಿಯ ಮನೆಗೂ ಹೋಗದೆ ವಾಪಸ್ಸು ತನ್ನ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ಮಾಹಿತಿ ಸಿಕ್ಕಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ವಿನಂತಿಸಲಾಗಿದೆ.