ಕಾರ್ಕಳ: ನಂದಳಿಕೆ ಕ್ರಾಸ್ ಬಳಿ ದ್ವಿಚಕ್ರ ವಾಹನ ಡಿಕ್ಕಿ – ಬಾಲಕಿ‌ ಮೃತ್ಯು.

ಉಡುಪಿ: ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ನಂದಳಿಕೆ ಕ್ರಾಸ್ ಬಳಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ನಂದಳಿಕೆ ನಿವಾಸಿ ಪ್ರಣಮ್ಯ ಶೆಟ್ಟಿ (14) ಎಂದು ಗುರುತಿಸಲಾಗಿದೆ. ಪ್ರಣಮ್ಯ ಅವರು ನಂದಳಿಕೆಯ ಲಕ್ಷ್ಮೀ ಜನಾರ್ದನ ದೇವಾಲಯಕ್ಕೆ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದ್ದು, ಇದರಿಂದ ಅವರು‌ ಗಂಭೀರವಾಗಿ ಗಾಯಗೊಂಡಿದ್ದಾರೆ.