ಕಾರ್ಕಳ ತಾಲೂಕಿನಲ್ಲಿ‌ ಭಾರೀ ಗಾಳಿ ಸಹಿತ ಮಳೆ: ಗಾಳಿಯ ಹೊಡೆತಕ್ಕೆ ಹಾರಿ ಹೋದ ಅಂಗಡಿಗಳ ಮೇಲ್ಛಾಣಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂದ ಮಂಗಳವಾರ ಸಂಜೆ ಗಾಳಿ ಸಹಿತ ಮಳೆ ಸುರಿದಿದ್ದು, ಬಿಸಿಲಿನ ಧಗೆಯಿಂದ ಸುಡುತ್ತಿದ್ದ ಇಳೆಗೆ ತಂಪೆರೆದಿದೆ.

ಕಾರ್ಕಳ ತಾಲೂಕಿನ ವಿವಿಧೆಡೆ ಭಾರೀ ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ಜೋರಾಗಿ ಬೀಸಿದ ಗಾಳಿಯ ಹೊಡೆತಕ್ಕೆ ಅಂಗಡಿಗಳ ಸೀಟು, ಟರ್ಪಾಲ್ ಗಳು ಹಾರಿ ಹೋಗಿವೆ.

ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕಾರ್ಕಳ ಪೇಟೆ ಭಾಗ, ಕುಕ್ಕುಂದೂರು, ಮಿಯ್ಯಾರು, ರೆಂಜಾಲ, ಬಜಗೋಳಿ, ದಿಡಿಂಬಿರಿ, ಮಾಳ, ನೆಲ್ಲಿಕಾರು, ಕೆರ್ವಾಶೆಯಲ್ಲಿ ಜೋರು ಮಳೆಯಾಗಿದೆ.