ಕಾರ್ಕಳ: ಎಎಸ್‌ಪಿಯಾಗಿ ಡಾ. ಹರ್ಷ ಪ್ರಿಯಂವದ ನೇಮಕ.

ಕಾರ್ಕಳ: ಕಾರ್ಕಳ ಪೊಲೀಸ್ ಉಪ ವಿಭಾಗಕ್ಕೆ ಎಎಸ್ ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಹರ್ಷ ಪ್ರಿಯಂವದ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಜಾರ್ಖಂಡ್ ಮೂಲದ ಹರ್ಷ ಪ್ರಿಯಂವದ ಅವರು ಎಂಬಿಬಿಎಸ್ ಪದವೀಧರೆಯಾಗಿದ್ದು, 2020ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದಿದ್ದರು.

ಪ್ರಸ್ತುತ ಕಾರ್ಕಳ ಡಿವೈಎಸ್ ಪಿ ಅರವಿಂದ ಕಲಗುಜ್ಜಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.