ಕಾರ್ಕಳ : ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬುವಲ್ಲಿ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳೇ ಮೇಲು.ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ .ಜವಾಬ್ದಾರಿಯನ್ನು ಅರಿತವನಿಗೆ ಭಾಷೆ ಮುಖ್ಯ ಅಲ್ಲ ಎಂದು ಸೈಂಟ್ ಎಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿನ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಸಸ್ಯಶಾಸ್ತ್ರ ವಿಭಾಗ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ನಿರ್ದೇಶಕರಾದ ಪ್ರೊ.ಸುರೇಶನಾಥ್ ಎಮ್. ಎಲ್ ಅವರು ಹೇಳಿದ್ದಾರೆ.
ಅವರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ 2023-24ನೇ ಸಾಲಿನ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯವನ್ನು ರಚನಾತ್ಮಕವಾಗಿ, ಬಳಸಿಕೊಂಡರೆ ಕನಸನ್ನು ನನಸಾಗಿಸಲು ಸಾಧ್ಯ. ಸಮಯವನ್ನು ವ್ಯರ್ಥಮಾಡದಿರಿ ಎಂದು ಕಥಾವಳಿಯ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಿರಣ್ ಎಂ ಇವರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು ಮತ್ತು ಸಾಧನೆಗೆ ಗುರುಗಳ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸಹಾನುಭೂತಿ , ತಾಳ್ಮೆ, ಮತ್ತು ಸ್ನೇಹದ ಗುಣವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯವೂ ಬೇಕು ಎಂದರು.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸಹಪ್ರಾಧ್ಯಾಪಕ ಡಾ.ಸುದರ್ಶನ್, ಸಹಾಯಕ ಪ್ರಾಧ್ಯಾಪಕರಾದ ಸೌಮ್ಯಾ ಎಚ್ ಕೆ. ಪ್ರೊ.ಜಯಲಕ್ಷ್ಮೀ ಡಾ.ಸುಬ್ರಹ್ಮಣ್ಯ, ಪ್ರೊ.ಸಂಧ್ಯಾ ಭಂಡಾರಿ, ಡಾ.ದಿವ್ಯಾ ಪ್ರಭು, ಡಾ.ಸುನೀತಾ ಪಿರೇರಾ, ಪ್ರೊ.ಮೈತ್ರಿ ಬಿ, ಡಾ.ಅವಿನಾಶ್, ರಕ್ಷಾ ಬಹುಮಾನಿತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಚಂದ್ರಾವತಿ,
ಕಾಲೇಜಿನ ಐಕ್ಯೂಎಸಿ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ರಾವ್, ಪೋಷಕರ ವೇದಿಕೆಯ ಅಧ್ಯಕ್ಷರಾದ ಸಂಜೀವ ಪಳ್ಳಿ, ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿಗಳಾದ ಕೀರ್ತನ್, ಅಜಿತ್,ರಕ್ಷಿತ್ ಶೆಟ್ಟಿ,ಹಾರ್ದಿಕ್ ಶೆಟ್ಟಿ,ಜೀವನ್ , ಅನನ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಧ್ಯಾಪಕ ವೃಂದ, ಬೋಧಕೇತರ ಸಿಬ್ಬಂದಿಗಳು , ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಚಂದ್ರಾವತಿ ಅವರು ಸ್ವಾಗತಿಸಿದರು. ಸೌಮ್ಯ ಮತ್ತು ಬಳಗದವರು ಪ್ರಾರ್ಥಿಸಿದರು.
ವಿದ್ಯಾರ್ಥಿನಿಯರಾದ ಧನ್ಯ ಮತ್ತು ಶ್ರೇಯ ನಿರೂಪಿಸಿ , ವಿದ್ಯಾರ್ಥಿವೇದಿಕೆ ಕಾರ್ಯದರ್ಶಿ ಅಜಿತ್ ವಂದಿಸಿದರು.