ಕಾರ್ಕಳ: ಅಂಗಡಿ ಮುಗ್ಗಟ್ಟು, ಮಾರ್ಕೆಟ್ ಗಳಿಗೆ ಅಧಿಕಾರಿಗಳ ದಾಳಿ; ದಂಡ ವಸೂಲಿ

ಉಡುಪಿ: ಕಾರ್ಕಳ ಪುರಸಭೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಸಂಗ್ರಹಣೆ , ಮಾರಾಟ ಬಳಕೆ ನಿಷೇಧ ಕಾಯ್ದೆ ಅನ್ವಯ ಕಾರ್ಕಳ ಪುರಸಭಾ ಅಧಿಕಾರಿಗಳು ಅಂಗಡಿ ಮುಗ್ಗಟ್ಟು, ಹೋಟೆಲ್ ,ಮಾರ್ಕೆಟ್ ಗಳಿಗೆ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಯವರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 2ಕೆಜಿಗಳಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ಸುಮಾರು 8800 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪುರಸಭಾ ಕಂದಾಯ ಅಧಿಕಾರಿ ಅಶೋಕ್, ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಜಿ, ಪರಿಸರ ಅಭಿಯಂತರ ಜ್ಯೋತಿಶ್ವರಿ, ಹಿರಿಯ ಆರೋಗ್ಯ ಅಧಿಕಾರಿ ಲೈಲಾ ಥಾಮಸ್, ಸಮುದಾಯ ಸಂಘಟಕ ಮಲ್ಲಿಕಾ ಪುರಸಭಾ ಸಿಬ್ಬಂದಿಗಳಾದ ಅಮೃತ ,ಲೋಲಾಕ್ಷಿ, ಜಗನ್ನಾಥ್ ಶೆಟ್ಟಿ, ಕೀರ್ತಿ, ಪ್ರಥ್ವಿ , ಪೌರಕಾರ್ಮಿಕರು ಉಪಸ್ಥಿತರಿದ್ದರು