ಕಾರ್ಕಳ:ವ್ಯಕ್ತಿ ನಾಪತ್ತೆ

ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಬೋರ್ಕಟ್ಟೆಯಲ್ಲಿ ಒಬ್ಬರೇ ವಾಸವಿದ್ದ ಬಿ ವಿಜೇಂದ್ರ ಪ್ರಭು (56) ಎಂಬ ವ್ಯಕ್ತಿಯ ಸಹೋದರರು 2022 ರ ಫೆಬ್ರವರಿ 21 ರಂದು ಬೋರ್ಕಟ್ಟೆಯ ತಮ್ಮ ಮನೆಗೆ ಬಂದಾಗ ಬಿ. ವಿಜೇಂದ್ರ ಪ್ರಭು ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ ಅಕ್ಕಪಕ್ಕದವರ ಬಳಿ ವಿಚಾರಿಸಿದಾಗ ಸುಮಾರು ದಿನಗಳಿಂದ ಅವರನ್ನು ನೋಡಿಲ್ಲವೆಂದು ತಿಳಿಸಿರುತ್ತಾರೆ.

5 ಅಡಿ 5 ಇಂಚು ಎತ್ತರ ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುವ ಕನ್ನಡ, ತುಳು ಹಾಗೂ ಕೊಂಕಣಿ ಭಾಷೆ ಮಾತನಾಡುವ ಮೇಲ್ಕಂಡ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂ.ಸಂಖ್ಯೆ: 08258-231083 ಮೊ.ನಂ:9480805435 ಕಾರ್ಕಳ ನಗರ ಠಾಣೆ ದೂ.ಸಂಖ್ಯೆ:08258-233100, 230213, ಮೊ.ನಂ:9480805461 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.