ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಅ.3ರಿಂದ ಅ.12ರವರೆಗೆ ಶರನ್ನವರಾತ್ರಿ ಮಹೋತ್ಸವ.

ಉಡುಪಿ: ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ(ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿದ್ದು)ದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

ಅ.03 ರಿಂದ ಅ.12 ರವರೆಗೆ ಕಾರ್ಯಕ್ರಮಗಳು:
ಪ್ರತಿದಿನ ಶ್ರೀದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ
ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ತಾ.08-10-2024 ಮಂಗಳವಾರ: ಕದಿರು ಕಟ್ಟುವುದು.

ತಾ.09-10-2024 ನೇ ಬುಧವಾರ: ಶಾರದಾ ಪೂಜೆ

ತಾ.11-10-2024 ನೇ ಶುಕ್ರವಾರ: ದುರ್ಗಾಷ್ಟಮಿ, ದುರ್ಗಾನಮಸ್ಕಾರ ಪೂಜೆ.

ತಾ. 13-10-2024 ನೇ ರವಿವಾರ: ವಿಜಯದಶಮಿ, ಕಲಶ ವಿಸರ್ಜನೆ.

ತಾ.15-10-2024 ನೇ ಮಂಗಳವಾರ: ಚಂಡಿಕಾಯಾಗ, ಪೂರ್ಣಾಹುತಿ, ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿದಿನ ಸಾಯಂಕಾಲ ಗಂಟೆ 6.00 ರಿಂದ ಭಜನಾ ಕಾರ್ಯಕ್ರಮ (ವಿವಿಧ ಭಜನಾ ಮಂಡಳಿಯವರಿಂದ) ನಡೆಯಲಿದ್ದು ಹಾಗೂ ಪ್ರತಿದಿನ ರಾತ್ರಿ ಘಂಟೆ 7.00 ಕ್ಕೆ ಶ್ರೀ ದುರ್ಗ ನಮಸ್ಕಾರ ಪೂಜೆ ನಡೆಯಲಿದೆ.

ಸರ್ವರಿಗೂ ಆದರದ ಸ್ವಾಗತ ಬಯಸುವ

ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು, ಪ್ರಕಟಣೆ ತಿಳಿಸಿದೆ.