ಕಾಪು: ಕಾಪು ಕ್ಷೇತ್ರದಲ್ಲಿ ಮಾತ್ರವಲ್ಲದೆ ತುಳುನಾಡಿನದ್ಯಂತ ತನ್ನ ಆದರ್ಶ ವ್ಯಕ್ತಿತ್ವದಿಂದಲೇ ಜನಮನ್ನಣೆ ಪಡೆದು ಸಮಾಜದ ಸರ್ವರ ಆಪ್ತಮಿತ್ರನಂತಿದ್ದ ಸಮಾಜ ಸೇವಕ ಕಾಪು ಲೀಲಾಧರ್ ಶೆಟ್ಟಿ ಅವರು ಅವರ ಅರ್ಧಾಂಗಿ ಶ್ರೀಮತಿ ವಸುಂಧರಾ ಲೀಲಾಧರ ಶೆಟ್ಟಿ ಅವರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ವಿಚಾರ ನೆನ್ನೆ ರಾತ್ರಿ ನಡೆದಿದೆ.
ಇವರು ಕಾಪು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಕಾಪು ರಂಗತರಂಗ ನಾಟಕ ತಂಡ ಕಟ್ಟಿ ಬೆಳೆಸಿದ ಕೀರ್ತಿ ಇವರದು, ಈ ತಂಡದ ಯಜಮಾನಿಕೆಯೊಂದಿಗೆ ಅತ್ಯಂತ ಸುಪ್ರಸಿದ್ಧಿ ಹೊಂದಿದ್ದ ಇವರು ಗುರ್ಮೇ ಸುರೇಶ್ ಶೆಟ್ಟಿ ಅವರ ಅತ್ಯಾಪ್ತ ಸ್ನೇಹಿತ,ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕರಾಗಿ ಹಾಗೂ ಅತ್ಯುತ್ತಮ ನಟ ನಿರ್ದೇಶಕರಾಗಿ ಜನಮನ್ನಣೆ ಪಡೆದ ಇವರು ಇವರ ಜೀವನವೆಂಬ ನಾಟಕ ರಂಗದಲ್ಲಿ ಸೋಲನ್ನು ಅನುಭವಿಸಿ ಆತ್ಮಹತ್ಯೆಯ ದಾರಿ ಹಿಡಿದದ್ದು ತೀವ್ರ ಆಘಾತಕಾರಿ ವಿಚಾರವಾಗಿದೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ.












