ಉಡುಪಿ: ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮಂಗಳವಾರ ಮಂಜಾನೆ ರಾಷ್ಟ್ರೀಯ ಹೆದ್ದಾರಿ ಉದ್ಯಾವರದಲ್ಲಿ ನಡೆದಿದೆ.
ಕಾಪು ನಿವಾಸಿ ಬಾಬು ಶೆಟ್ಟಿಗಾರ್ (70) ಮೃತ ವ್ಯಕ್ತಿಯಾಗಿದ್ದಾರೆ. ಬಾಬು ಶೆಟ್ಟಿಗಾರ್ ಅವರು ಟೈಲರಿಂಗ್ (ಬಟ್ಟೆ ಹೊಲಿಯುವ) ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದಾಗಿ ಬಾಬು ಅವರ ಸಹೋದರ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ಈ ಅಪಘಾತ ನಡೆದಿದೆ.
ಉಡುಪಿ – ಮಂಗಳೂರು ರಸ್ತೆಯಲ್ಲಿರುವ ಉದ್ಯಾವರ ಹಲೀಮಾ ಸಾಬ್ಬು ಸಭಾಂಗಣ ಬಳಿಯ ಶೋರೂಂ ಬಳಿ ಈ ಅಪಘಾತ ಸಂಭವಿಸಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.