ಉಡುಪಿ: ಕಾಂತಾರ ಮಾಡಿದ ರಿಷಬ್ ಶೆಟ್ಟಿ, ಶಿವಾಜಿ ಸಿನಿಮಾ ಮಾಡಬಾರದು. ರಾಜ್ಯದಲ್ಲಿ ದೊಡ್ಡ ದೊಡ್ಡ ಮಹಾನೀಯರು, ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅದನ್ನು ಬಿಟ್ಟು ಶಿವಾಜಿ ಪಾತ್ರ ಮಾಡಬಾರದು. ಅದು ಒಳ್ಳೆಯ ಸೂಚನೆ ಅಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ರು.
ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ಅಭಿನಯ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಕಾಂತಾರ ಸಿನಿಮಾಕ್ಕೆ ವ್ಯಾಪಕ ಪ್ರಶಂಸೆ, ಹಣ- ಗೌರವ ಬಂದಿದೆ. ಒಂದು ವೇಳೆ ರಿಷಬ್ ಶಿವಾಜಿ ಪಾತ್ರ ಮಾಡಿದ್ರೆ, ಕಾಂತಾರದಲ್ಲಿ ಸಿಕ್ಕ ಗೌರವ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ರಿಷಬ್ ಶೆಟ್ಟಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ ಎಂದರು.












