ಕಳತ್ತೂರು:ಕೆ ಪಿ ಸಿ ಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಕಾಪು ದ್ವಾದಶಿ ಪಬ್ಲಿಸಿಟಿಯ 2 ನೇ ಶಾಖೆಗೆ ಕಳತ್ತೂರು ಪುಂಚಲಕಾಡು ಗ್ರಾಮದಲ್ಲಿ ಉದಯವಾಣಿ ಪತ್ರಿಕೆಯ ಜಾಹೀರಾತು ಗ್ರಾಮೀಣ ಕಚೇರಿಗೆ ಭೇಟಿ ನೀಡಿ ಸಂಸ್ಥೆಗೆ ಶುಭಕೋರಿದರು.
ಕರ್ನಾಟಕದ ಕರಾವಳಿ ಪ್ರದೇಶ ಅತೀ ಹೆಚ್ಚು ಪ್ರಸಾರವಾಗುವ ಗ್ರಾಮಾಂತರ ಜನರ ಮನೆ ಮನೆಗೆ ತಲುಪುವ ಏಕೈಕ ಪತ್ರಿಕೆ ಉದಯವಾಣಿ ಪುಟ್ಟ ಗ್ರಾಮ ಪುಂಚಲಕಾಡುವಿನಲ್ಲಿ ಶಾಖೆಯು ತೆರೆದಿದ್ದು ತುಂಬಾ ಸಂತೋಷವಾಯಿತು ಇನ್ನಷ್ಟು ಸಂಸ್ಥೆಯು ಬೆಳೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ದಿವಾಕರ್ ಬಿ ಶೆಟ್ಟಿ ಕಳತ್ತೂರು ಇವರು ಸೊರಕೆ ಯನ್ನು ಅಭಿನಂದಿಸಿ ಸಂಸ್ಥೆಯ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆ ಎಂ ಎಫ್ ಬೆಂಗಳೂರು ರಾಜ್ಯ ಸಮಿತಿಯ ನಿರ್ದೇಶಕ ಕಾಪು ದಿವಾಕರ್ ಶೆಟ್ಟಿ. ಗೌರವ ಡಾಕ್ಟರೆಟ್ ಪಡೆದ ಡಾ| ಮಹಮ್ಮದ್ ಫಾರುಕ್ ಚಂದ್ರನಗರ, ಗಣ್ಯರಾದ ದಿವಾಕರ್ ಡಿ. ಶೆಟ್ಟಿ, ಲಿಯೋಮೆಂಡೋನ್ಸ, ಶಶಿಕಾಂತ್ ಆಚಾರ್ಯ, ಕುತ್ಯಾರು ಪಂಚಾಯತ್ ಸದಸ್ಯರಾದ ಸ್ಲಾನ್ಸಿ ಕೋಡ್ದ,ಕೃಷ್ಣ ಕುಲಾಲ್, ಮಾಜಿ ಸದಸ್ಯ ರಾಜೇಶ್ ಮೂಲ್ಯ, ಐರಿನ್ ತಾವ್ರೋ ಉಪಸ್ಥಿತರಿದ್ದರು.