ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಉಡುಪಿ: ಕರ್ನಾಟಕ ರಾಜ್ಯ ಗ್ರಾಮೀಣ
ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ,ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇವರ ಆಶಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಮಾಸೋತ್ಸವ ಪ್ರಯುಕ್ತ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗೀತಾಮಂದಿರದಲ್ಲಿ
ಚಾಲನೆ ಹಾಗೂ ರಾಜಾಂಗಣದಲ್ಲಿ ಇದರ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಶ್ರೀ
ಸುಶ್ರೀಂದ್ರ ತೀರ್ಥ ಶ್ರೀಪಾದರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕಶ್ರೀ ರಘುಪತಿ ಭಟ್, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಉದ್ಯಮಿಗಳಾದ ಹರಿಪ್ರಸಾದ್ ರೈ, ಭುವನೇಂದ್ರ ಕಿದಿಯೂರು, ಸುರೇಂದ್ರ
ಕಲ್ಯಾಣಪುರ್, ಪ್ರದೀಪ್ ಕಲ್ಕೂರ, ಪ್ರೇಮ್ ಮಿನೇಜಸ್, ಕಟಪಾಡಿ ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮುರಹರಿ ಆಚಾರ್ಯ, ಮಠದ ದಿವಾನರಾದ ನಾಗರಾಜ ಆಚಾರ್ಯ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ತಾಲೂಕು ವ್ಯವಸ್ಥಾಪಕಿ ಸುಜಾತಾ, ಪ್ರಶಾಂತ್,
ಸವಿತಾ, ಬಬೀತಾ ಹಾಗೂ ಸಂಜೀವಿನಿ ಸ್ವ ಸಹಾಯ ಸಂಘಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಆಗಸ್ಟ್ 31 ರ ವರೆಗೆ ನಡೆಯುವ ಈ ವಸ್ತು ಪ್ರದರ್ಶನದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಂಜೀವಿನಿ ಮಹಿಳೆಯರ 23 ಮಳಿಗೆಗಳಿದ್ದು ಈ ಮಳಿಗೆಗಳಲ್ಲಿ ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಹ್ಯಾಂಡ್ ಮೇಡ್ ಬ್ಯಾಗ್, ಬಿದಿರಿನ ಬುಟ್ಟಿ, ತೆಂಗಿನ ಚಿಪ್ಪಿನ ವಿವಿಧ ಕಲಾಕೃತಿಗಳು, ಅಲಂಕಾರಿಕ ಹೂವಿನ ಗಿಡಗಳು, ಗೊಂಬೆಗಳು, ಕೈಮಗ್ಗ ಸೀರೆ, ಇತ್ಯಾದಿ ವಸ್ತುಗಳು ಲಭ್ಯವಿರಲಿವೆ.